ಮಾನೆಟರಿ ಪಾಲಿಸಿ ಮೀಟಿಂಗ್:‌ ರೆಪೋ ದರ 6.50%ನಲ್ಲಿ ಕಂಟಿನ್ಯೂ

Masthmagaa.com:

ಬಹುನಿರೀಕ್ಷಿತ RBI ಮಾನಿಟರಿ ಪಾಲಿಸಿ ಮೀಟಿಂಗ್‌ ಮುಗಿದಿದ್ದು RBI ಸತತ ಆರನೇ ಬಾರಿಗೆ ರೆಪೋ ರೇಟ್‌ನ್ನ ಯಥಾಸ್ಥಿತಿಯಲ್ಲಿ ಮುಂದುವರೆಸಿದೆ. ರೆಪೋ ರೇಟ್‌ ಅಂದ್ರೆ RBI ಇತರ ಬ್ಯಾಂಕ್‌ಗಳಿಗೆ ಕೊಡೋ ಸಾಲಕ್ಕೆ ವಿಧಿಸೋ ಬಡ್ಡಿಯ ದರ. ಈಗ ರೆಪೋರೇಟ್‌ 6.50%ರಲ್ಲೇ ಕಂಟಿನ್ಯೂ ಆಗಲಿದೆ. ಇನ್ನು ಚಿಲ್ಲರೆ ಹಣದುಬ್ಬರ ನವೆಂಬರ್‌ನಲ್ಲಿ 5.55% ಇತ್ತು. ಡಿಸೆಂಬರ್‌ನಲ್ಲಿ ಸ್ವಲ್ಪ ಜಾಸ್ತಿ ಆಗಿ 5.69% ಆಗಿದೆ. ಅಂದ್ರೆ RBIನ 4% ಟಾರ್ಗೆಟ್‌ಗಿಂತ ಸ್ವಲ್ಪ ಜಾಸ್ತಿನೇ ಇದೆ. ಇತ್ತೀಚೆಗೆ ಮಧ್ಯಂತರ ಬಜೆಟ್‌ ಮಂಡನೆ ಆಗಿದ್ರಿಂದ ಮಾನೆಟರಿ ಪಾಲಿಸಿಯಲ್ಲಿ ಕೆಲವು ಬದಲಾವಣೆ ಆಗ್ಬೋದು ಅನ್ನೋ ನಿರೀಕ್ಷೆ ಇತ್ತು. ಆದ್ರೆ ಲೆಂಡಿಂಗ್‌ ರೇಟ್‌ನಲ್ಲಿ ಯಾವುದೇ ಚೇಂಜಸ್‌ ಆಗಿಲ್ಲ. ಆರ್ಥಿಕ ಬೆಳವಣಿಗೆ ಚೇತರಿಗೆ ಆಗ್ತಿರೋದ್ರಿಂದ ದರಗಳಲ್ಲಿ ಬದಲಾವಣೆ ತಂದಿಲ್ಲ ಅಂತ RBI ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ. ಅಂದ್ಹಾಗೆ ಕೋವಿಡ್‌ ನಂತರ 2022ರ ಮೇನಿಂದ 2023ರ ಫೆಬ್ರವರಿವರೆಗೆ ರೆಪೋ ದರವನ್ನ 250 ಬೇಸಿಸ್‌ ಪಾಯಿಂಟ್‌ಗಳಷ್ಟು ಜಾಸ್ತಿ ಮಾಡಿತ್ತು. ಇನ್ನು 2024-25ರ ಆರ್ಥಿಕ ವರ್ಷಕ್ಕೆ ಭಾರತದ ಬೆಳವಣಿಗೆ ದರ 7% ಇರುತ್ತೆ ಅಂತ RBI ಪ್ರೆಡಿಕ್ಟ್‌ ಮಾಡಿದೆ. ಈ ಹಿಂದೆ ಗ್ರೋತ್‌ ರೇಟ್ 7.3% ಇರುತ್ತ ಅಂತ ಅಂದಾಜಿಸಲಾಗಿತ್ತು. ಈಗ ಸ್ವಲ್ಪ ಕಮ್ಮಿ ಮಾಡಿದೆ. ಇನ್ನು ಕ್ಯಾಪಿಟಲ್‌ ಎಕ್ಸ್‌ಪಿಂಡಿಚರ್‌ ಅಥ್ವಾ ಬಂಡವಾಳ ವೆಚ್ಚ ಜಾಸ್ತಿಯಾಗ್ತಿರೋದ್ರಿಂದ ಹೂಡಿಕೆ ಚಕ್ರದಲ್ಲೂ ಇಂಪ್ರೂವ್‌ಮೆಂಟ್‌ ಕಂಡಿದೆ ಅಂತ RBI ಹೇಳಿದೆ.

-Masthmagaa.com

Contact Us for Advertisement

Leave a Reply