ಪೂಜಾ ಸ್ಥಳದ ಕಟ್ಟಡ ನಾಶಗೊಳಿಸಿ, ವಾಣಿಜ್ಯ ಕಟ್ಟಡ ನಿರ್ಮಿಸೋ ಹಾಗಿಲ್ಲ: ಪಾಕ್‌ ಸರ್ಕಾರ

masthmagaa.com:

ಪೂಜಾ ಸ್ಥಳದ ಕಟ್ಟಡವನ್ನ ನೆಲಸಮಗೊಳಿಸಿ ಆ ಸ್ಥಳದಲ್ಲಿ ವಾಣಿಜ್ಯ ಬಳಕೆಯ ಕಟ್ಟಡವನ್ನ ನಿರ್ಮಿಸಲು ಅನುವು ಮಾಡಲ್ಲ. ಪೂಜಾ ಸ್ಥಳ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ರೂ ಅವಕಾಶವಿಲ್ಲ ಅಂತ ಪಾಕಿಸ್ತಾನದ ಸಿಂಧ್‌ ಸರ್ಕಾರ ಹೇಳಿದೆ. ಇತ್ತೀಚೆಗೆ ಕರಾಚಿಯಲ್ಲಿದ್ದ 150 ವರ್ಷ ಹಳೆಯ ಹಿಂದೂ ದೇವಸ್ಥಾನವನ್ನ ನೆಲಸಮಗೊಳಿಸಲಾಗಿತ್ತು. ಈ ಪ್ರಕರಣ ವರದಿಯಾದ ಬಳಿಕ ಸರ್ಕಾರ ಹೀಗೆ ಪ್ರತಿಕ್ರಿಯಿಸಿದೆ. ಹಾಗೂ ದೇವಸ್ಥಾನವಿದ್ದ ಜಾಗದಲ್ಲಿ ಕಟ್ಟಡ ನಿರ್ಮಾಣ ಹಾಗೂ ನೆಲಸಮಗೊಳಿಸುವ ಕೆಲಸಕ್ಕೆ ತಡೆ ನೀಡುವಂತೆ ಪೊಲೀಸರು ಹಾಗೂ ಸ್ಥಳೀಯ ಆಡಳಿತಕ್ಕೆ ಆದೇಶ ನೀಡಿದೆ.

-masthmagaa.com

Contact Us for Advertisement

Leave a Reply