ದಿಲ್ಲಿ ಮೇಯರ್‌ ಚುನಾವಣೆಯಲ್ಲಿ ಬಿಜೆಪಿ-ಆಪ್‌ ನಡುವೆ ಭಾರಿ ಗಲಾಟೆ! ಯಾಕೆ?

masthmagaa.com:

ದಿಲ್ಲಿಯಲ್ಲಿ ಇಂದು ಮೇಯರ್‌ ಚುನಾವಣೆ ವೇಳೆ ಆಪ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ಗಲಾಟೆ ಉಂಟಾಗಿದೆ. ಬೆಳಿಗ್ಗೆ ಪಾಲಿಕೆ ಸಭೆ ಆರಂಭವಾಗ್ತಿದ್ದಂತೆ, ಸ್ಪೀಕರ್‌ ನೇಮಕ ವಿಷಯದಲ್ಲಿ ಉಭಯ ಪಕ್ಷಗಳ ಸದಸ್ಯರು ಪರಸ್ಪರ ಕೂಗಿ ಗದ್ದಲ ಸೃಷ್ಟಿಸಿದ್ದಾರೆ. ಕಲಾಪ ನಡೆಸೋಕೆ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದ್ರಿಂದ ಮೇಯರ್‌ ಆಯ್ಕೆಯನ್ನ ಮುಂದೂಡಲಾಗಿದೆ. ಅಂದ್ಹಾಗೆ ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೇನಾ ಅವ್ರು ತಾತ್ಕಾಲಿಕವಾಗಿ ಬಿಜೆಪಿಯ ಸತ್ಯ ಶರ್ಮಾ ಅವರನ್ನ ಸ್ಪೀಕರ್‌ ಆಗಿ ಆಯ್ಕೆ ಮಾಡ್ತಿದ್ದಂತೆ ಸಭೆಯಲ್ಲಿ ಸಂಘರ್ಷ ಶುರುವಾಯಿತು. ಬಳಿಕ ಶರ್ಮಾ ಮೊದಲಿಗೆ ನಾಮನಿರ್ದೇಶನಗೊಂಡ ಸದಸ್ಯರಿಗೆ ಪ್ರಮಾಣ ವಚನ ಬೋಧಿಸೋಕೆ ಮುಂದಾದ್ರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಪ್‌ ಸದಸ್ಯರು ಮೊದಲು ಚುನಾಯಿತ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಬೇಕು ಅಂತ ಪಟ್ಟು ಹಿಡಿದ್ರು. ಹೀಗೆ ಬಿಜೆಪಿ ಹಾಗೂ ಆಪ್‌ ಸದಸ್ಯರ ನಡುವೆ ಜಟಾಪಟಿ ಉಂಟಾಗಿದೆ.

-masthmagaa.com

Contact Us for Advertisement

Leave a Reply