KSRTC ನೌಕರರಿಗೆ ದಿನಕ್ಕೆ 8ಗಂಟೆ ಮಾತ್ರ ಕೆಲ್ಸ; ಅತ್ತ ಟೋಲ್‌ ದರ ಹೆಚ್ಚಳ!

masthmagaa.com:

KSRTC ನೌಕರರಿಗೆ ಈಗ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ವೊಂದನ್ನ ನೀಡಿದೆ. ಡಬಲ್‌ ಡ್ಯೂಟಿ ಮಾಡಿ ಸುಸ್ತಾಗ್ತಿದ್ದ ನೌಕರರು ಇನ್ಮುಂದೆ ದಿನಕ್ಕೆ 8ಗಂಟೆ ಮಾತ್ರ ಕಾರ್ಯ ನಿರ್ವಹಿಸ್ಬೇಕು ಅಂತ ಸರ್ಕಾರ ಸೂಚನೆ ನೀಡಿದೆ. ಅಲ್ದೇ ವಾರದಲ್ಲಿ ಕೆಲಸದ ಅವಧಿ 48ಗಂಟೆಗೆ ಸಿಮೀತವಾಗ್ಬೇಕು ಅಂತ ಸರ್ಕಾರ ಹೇಳಿದೆ. ಅಂದ್ಹಾಗೆ ಡಬಲ್‌ ಡ್ಯೂಟಿಯಿಂದ ಇತ್ತೀಚಿಗೆ ರಾಜ್ಯದಲ್ಲಿ ಹೆಚ್ಚಿನ ರಸ್ತೆ ಅಪಘಾತಗಳಾಗ್ತಿವೆ ಎನ್ನಲಾಗಿತ್ತು. ಇದನ್ನ ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ ಅಂತ ಗೊತ್ತಾಗಿದೆ. ಮತ್ತೊಂದೆಡೆ ಬರೋ ಏಪ್ರಿಲ್‌ 1ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ಹೆಚ್ಚಳವಾಗಲಿದೆ ಅಂತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. ಸದ್ಯದ ದರಕ್ಕಿಂತ ಕಾರ್‌ಗೆ 10ರೂಪಾಯಿ, ಹಾಗೇ ಬಸ್‌, ಟ್ರಕ್‌ಗಳಿಗೆ 15 ರೂಪಾಯಿ ಹೆಚ್ಚಾಗಲಿದೆ ಅಂತ ಪ್ರಾಧಿಕಾರ ತಿಳಿಸಿದೆ.

-masthmagaa.com

Contact Us for Advertisement

Leave a Reply