ನನ್ ಫೋಟೋ ಎಲ್ಲೂ ಬಿಡುಗಡೆ ಮಾಡ್ಬೇಡಿ: ಐಎಸ್​​ಐ ಮುಖ್ಯಸ್ಥ ಆದೇಶ

masthmagaa.com:

ಪಾಕಿಸ್ತಾನದ ಗೂಢಾಚಾರಿ ಸಂಸ್ಥೆ ಐಎಸ್​​ಐ ಹೊಸ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ನದೀಂ ಅಂಜುಮ್​​​ ತುಂಬಾ ನಿಗೂಢವಾಗ್ತಿದ್ದಾರೆ. ತಾವು ಯಾವುದೇ ಸಭೆಯಲ್ಲಿ ಭಾಗಿಯಾದ್ರೂ ಅದ್ರ ವಿಡಿಯೋ ಅಥವಾ ಫೋಟೋಗಳನ್ನು ಮಾಧ್ಯಮಗಳಿಗೆ ನೀಡಬಾರದು ಅಂತ ಕಟ್ಟಪ್ಪಣೆ ಮಾಡಿದ್ದಾರೆ. ಹೀಗಾಗಿ ಅವರು ಅಧಿಕಾರಕ್ಕೆ ಬಂದ ನಂತರ ಅವರ ಫೋಟೋಗಳಾಗಲೀ, ವಿಡಿಯೋಗಳಾಗಲೀ ಹೊರಬರ್ತಿಲ್ಲ. ಕಳೆದ ಸೋಮವಾರ ಪಾಕಿಸ್ತಾನದಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ನಡೀತು. ನಂತರ ಮಾಧ್ಯಮಗಳಿಗೆ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಆದ್ರೆ ಸಭೆಯಲ್ಲಿ ನದೀಂ ಅಂಜುಮ್ ಭಾಗಿಯಾಗಿದ್ರೂ ಅವರು ಒಂದೇ ಒಂದು ಫೋಟೋದಲ್ಲಿ ಇಲ್ಲ. ಈ ಹಿಂದೆ ಐಎಸ್​ಐ ಮುಖ್ಯಸ್ಥರಾಗಿದ್ದ ಹಮೀದ್ ಫೈಜ್​ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಟೇಕೋವರ್ ವೇಳೆ ಫುಲ್ ಕಾಣಿಸಿಕೊಂಡಿದ್ರು. ಅಲ್ಲೆ ಹೋಗಿ ಎರಡೆರಡು ದಿನ ಇದ್ದು ಬಂದಿದ್ರು.

-masthmagaa.com

Contact Us for Advertisement

Leave a Reply