ಕೆನದ: ಇಂದಿರಾ ಗಾಂಧಿ ಹತ್ಯೆ ಸ್ತಬ್ಧಚಿತ್ರ ಮೆರವಣಿಗೆ, ವಿಕೃತಿ ಮೆರೆದ ಖಲಿಸ್ತಾನಿ ಬೆಂಬಲಿಗರು

masthmagaa.com:

ಕೆನಡದಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರದ ಮೆರವಣಿಗೆ ಮಾಡಿ ಖಲಿಸ್ತಾನಿ ಪರ ಬೆಂಬಲಿಗರು ವಿಕೃತಿ ಮೆರೆದಿದ್ದಾರೆ. ಇಂದಿರಾ ಗಾಂಧಿ ಹತ್ಯೆಯನ್ನ ಸಂಭ್ರಮಿಸಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅದರ ಬೆನ್ನಲ್ಲೇ ಈ ಕುರಿತು ಸಾಕಷ್ಟು ಟೀಕೆ ಹಾಗೂ ವಿರೋಧಗಳು ವ್ಯಕ್ತವಾಗಿವೆ. ಕೆನಡದಲ್ಲಿ ಸುಮಾರು 5 ಕಿಲೋ ಮೀಟರ್‌ ದೂರದವರೆಗೆ ಖಲಿಸ್ತಾನಿ ಪರ ಬೆಂಬಲಿಗರು ಪರೇಡ್‌ ನಡೆಸಿದ್ದಾರೆ. ಇದರ ಭಾಗವಾಗಿ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರವನ್ನು ಕೊಂಡೊಯ್ಯಲಾಗಿದೆ. 36ನೇ ವರ್ಷದ ಅಪರೇಷನ್​ ಬ್ಲ್ಯೂ ಸ್ಟಾರ್​ ವರ್ಷಾಚರಣೆ ನಿಮಿತ್ತ ಜೂನ್​ 4ರಂದು ಈ ಮೆರವಣಿಗೆ ನಡೆಸಲಾಗಿದೆ ಅಂತ ಹೇಳಲಾಗುತ್ತಿದೆ. ಇದರ ವಿರುದ್ಧ ಭಾರತೀಯರು ಆಕ್ರೋಶ ಹೊರಹಾಕಿದ್ದು, ಇದನ್ನ ನೋಡಿ ನಮ್ಮ ರಕ್ತ ಕುದಿಯುತ್ತಿದೆ ಅಂತ ಕೆಲವರು ಕಾಮೆಂಟ್‌ ಮಾಡಿದ್ದಾರೆ. ಇತ್ತ ಖಲಿಸ್ತಾನ ಆಗಲು ಬಿಡಲ್ಲ. ಖಲಿಸ್ತಾನ ಹೆಸರಿನಲ್ಲಿ ತಮ್ಮ ಅಂಗಡಿಗಳನ್ನ ನಡೆಸುವ ಹಾಗೂ ಪಂಜಾಬಿಗಳ ಮಾನಹಾನಿ ಮಾಡುವ ಖಲಿಸ್ತಾನಿಗಳನ್ನ ನಿಯಂತ್ರಿಸಬೇಕು ಅಂತ ಪಂಜಾಬ್‌ನ ಕಾಂಗ್ರೆಸ್‌ ಅಧ್ಯಕ್ಷ ರಾಜಾ ವಾರಿಂಗ್‌ ಟ್ವೀಟ್‌ ಮಾಡಿದ್ದಾರೆ. ಇತ್ತ ಘಟನೆ ಕುರಿತು ಪ್ರತಿಕ್ರಿಯಿಸಿರೋ ಭಾರತೀಯ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌, ಪ್ರತ್ಯೇಕವಾದಿಗಳಿಗೆ, ಉಗ್ರವಾದಿಗಳಿಗೆ ಹಾಗೂ ಹಿಂಸೆಯನ್ನ ಪ್ರಚೋದಿಸುವವರಿಗೆ ಸಾಕಷ್ಟು ಜಾಗವನ್ನ ಕೆನಡ ಕೊಡ್ತಿದೆ. ಇದು ಭಾರತ ಹಾಗೂ ಕೆನಡ ಸಂಬಂಧಗಳಿಗೆ ಸಮಸ್ಯೆಯನ್ನ ಉಂಟು ಮಾಡುತ್ತೆ. ಇದು ಕೆನಡಕ್ಕೆ ಒಳ್ಳೆದಲ್ಲ ಅಂತ ವಾರ್ನಿಂಗ್‌ ನೀಡಿದ್ದಾರೆ.

-masthmagaa.com

Contact Us for Advertisement

Leave a Reply