ಹೊಸದಾಗಿ MSP ಸಮಿತಿಯನ್ನ ರಚಿಸಬೇಕು ಅಂತ ಪಂಜಾಬ್‌ ಸಿಎಂ ಹೇಳಿದ್ದೇಕೆ?

masthmagaa.com:

ಕನಿಷ್ಟ ಬೆಂಬಲ ಬೆಲೆ(MSP) ಕುರಿತು ಕಳೆದ ವಾರ ರಚಿಸಿರೊ ಸಮಿತಿಯನ್ನ ಮತ್ತೆ ಹೊಸದಾಗಿ ರಚಿಸಬೇಕು ಅಂತ ಕೇಂದ್ರ ಸರ್ಕಾರಕ್ಕೆ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಬೇಡಿಕೆ ಇಟ್ಟಿದ್ದಾರೆ. ಈಗ ರಚಿಸಿರೊ ಸಮಿತಿಯಲ್ಲಿ ಪಂಜಾಬ್‌ ರಾಜ್ಯದಿಂದ ಯಾವುದೇ ಪ್ರತಿನಿಧಿಯಿಲ್ಲ. ಹೀಗಾಗಿ ಸಮಿತಿಯನ್ನ ಮತ್ತೊಮ್ಮೆ ರಚಿಸಬೇಕು ಅಂತೇಳಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ರಿಗೆ ಪ್ರತ್ಯೇಕ ಪತ್ರಗಳನ್ನ ಬರೆದಿದ್ದಾರೆ. ಇನ್ನೊಂದ್‌ ಕಡೆ ಭ್ರಷ್ಟಾಚಾರ ವಿರೋಧಿ ಸಹಾಯವಾಣಿಗೆ 3 ಲಕ್ಷಕ್ಕಿಂತಲೂ ಅಧಿಕ ಕರೆಗಳು ಬಂದಿವೆ ಅಂತ ಪಂಜಾಬ್‌ ಸರ್ಕಾರ ಹೇಳಿದೆ. ಭ್ರಷ್ಟಾಚಾರದಲ್ಲಿ ತೊಡಗಿರೋರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳೋದಾಗಿಯೂ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply