ಪ್ರತಿಭಟಿಸಿದಕ್ಕೆ ಸುಮಾರು 1.5 ಲಕ್ಷ ಟೀಚರ್ಸ್‌ ಮನೆಗೆ! ಎಲ್ಲಿಗೊತ್ತಾ?

masthmagaa.com:

ಸಂಬಳದ ವಿಚಾರವಾಗಿ ಜಿಂಬಾಬ್ವೆ ಸರ್ಕಾರ ಹಾಗು ಅಲ್ಲಿನ ಟೀಚರ್ಸ್ಗಳ ನಡುವೆ ನಡೀತಿರೋ ಕೋಲ್ಡ್‌ ವಾರ್ ಗೆ ಅಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಳ್ಳ ಹಿಡೀತಿದೆ. ತಮಗೆ ನೀಡ್ತಿರೋ ಸಂಬಳ ಸಾಲ್ತಿಲ್ಲ ಅಂತ ಶಿಕ್ಷಕರು ಸ್ಕೂಲನ್ನ ಬಹಿಷ್ಕರಿಸಿದ್ರೆ. ಇತ್ತ ಈಗ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿದ್ದು, ಶಿಕ್ಷಕರನ್ನು ಸಸ್ಪೆಂಡ್‌ ಮಾಡಿದೆ. ಪರಿಣಾಮ ಈಗ ಸ್ಕೂಲ್‌ಗಳೆಲ್ಲಾ ಶಿಕ್ಷಕರಿಲ್ಲದೆ ಖಾಲಿ ಹೊಡಿತಿವೆ. ಜಿಂಬಾಂಬ್ವೆಯಲ್ಲಿರೋ ಒಟ್ಟು 1,40,000 ಶಿಕ್ಷಕರುಗಳ ಪೈಕಿ 1,35,000 ಟೀಚರ್ಸ್ಗಳನ್ನ ಅಮಾನತು ಮಾಡಲಾಗಿದೆ. ಅಂದ್ರೆ ಶೇಕಡಾ 90ಕ್ಕಿಂತ ಹೆಚ್ಚು ಶಿಕ್ಷಕರನ್ನ ಸಸ್ಪೆಂಡ್​ ಮಾಡಿದಂತಾಗಿದೆ. ಈ ಬಗ್ಗೆ ಮಾಹಿತಿ ಕೊಟ್ಟಿರುವ ಅಲ್ಲಿನ ಸರ್ಕಾರ, “ಹೊಸ ವರ್ಷದ ಕೊನೇ ವಾರದಿಂದ ಟೀಚರ್ಸ್ ಗಳು ಡ್ಯೂಟಿಗೆ ಆಬ್ಸೆಂಟ್‌ ಆಗ್ತಾ ಇದ್ದು ವಿದ್ಯಾರ್ಥಿಗಳು ಸ್ಕೂಲ್‌ನ ಒಳಗೆ ಹಾಗು ಗ್ರೌಂಡ್ನಲ್ಲಿ ಆಟ ಆಡ್ತಾ ಇದಾರೆ. ಇನ್ನು ಕೆಲವೊಂದಷ್ಟು ಸ್ಕೂಲುಗಳನ್ನ ಕಂಪ್ಲೀಟ್‌ ಬಂದ್‌ ಮಾಡಲಾಗಿದೆ” ಅಂತಾ ಹೇಳಿದೆ.

-masthmagaa.com

Contact Us for Advertisement

Leave a Reply