ರಾಜ್ಯದಲ್ಲಿ ಬೂಸ್ಟರ್‌ ಡೋಸ್‌ ನೀಡೋಕೆ ಕೋವಿಶೀಲ್ಡ್‌ ವ್ಯಾಕ್ಸಿನ್‌ ಕೊರತೆ!

masthmagaa.com:

ನೆರೆ ರಾಷ್ಟ್ರಗಳಲ್ಲಿ ಕೊರೊನಾ ಕೇಸ್‌ಗಳ ಏರಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕೊರೊನಾ ಆತಂಕ ಹೆಚ್ಚಾಗಿದೆ. ಆದ್ರೆ ಇದೇ ವೇಳೆ ಬೂಸ್ಟರ್‌ ಡೋಸ್‌ ತೆಗೆದುಕೊಳ್ಳೋಕೆ ಜನ್ರು ಪರದಾಡುವಂತಾಗ್ತಿದೆ. ಬೆಂಗಳೂರಿನ ಬಹುತೇಕ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್‌ ಖಾಲಿಯಾಗಿದೆ. ಕೋವಿಶೀಲ್ಡ್‌ ಇಲ್ಲದ ಕಾರಣ ಅದರ ಬದಲಿಗೆ ಕೋರ್ಬಿವ್ಯಾಕ್ಸ್‌ ಲಸಿಕೆ ನೀಡ್ತಿವೆ. ಆದ್ರೆ ಕೋವಿಶೀಲ್ಡ್‌ ಪಡೆದವ್ರು ಕೋರ್ಬಿವ್ಯಾಕ್ಸ್‌ ಪಡೆಯೋಕೆ ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಕೋವಿಶೀಲ್ಡ್‌ಗೆ ಡಿಮ್ಯಾಂಡ್‌ ಹೆಚ್ಚಾಗಿದ್ದು, ಲಸಿಕೆ ಮಾತ್ರ ಸಿಗ್ತಿಲ್ಲ. ಲಸಿಕಾ ಕೇಂದ್ರಗಳ ಬಳಿ ‘ನೋ ಸ್ಟಾಕ್’ ಬೋರ್ಡ್​ ಹಾಕಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರೋ ಸಚಿವ ಡಾ ಸುಧಾಕರ್, ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಡೋಸ್ ಕೊವಿಶೀಲ್ಡ್​, ಕೊವ್ಯಾಕ್ಸಿನ್​, ನೇಸಲ್ ಲಸಿಕೆಯಿವೆ​​​. ಕೇಂದ್ರ ಆರೋಗ್ಯ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿದ ನಂತ್ರ ಮಾಹಿತಿ ನೀಡ್ತೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply