ಚೀನಾದತ್ತ ನಾರ್ತ್‌ ಕೊರಿಯನ್‌ ನಿಯೋಗ: ದ್ವಿಪಕ್ಷೀಯ ಮಾತುಕತೆ!

masthmagaa.com:

ಚೀನಾಗೆ ಭೇಟಿ ನೀಡಿರೊ ನಾರ್ತ್‌ ಕೊರಿಯಾ ನಿಯೋಗ ದ್ವಿಪಕ್ಷೀಯ ಮಾತುಕತೆ ನಡೆಸಿದೆ. ನಾರ್ತ್‌ ಕೊರಿಯಾ ನಿಯೋಗದ ಮುಖ್ಯಸ್ಥ ಕಿಮ್‌ ಸಾಂಗ್‌ ನಾಮ್‌ ಚೀನಾದ ನಾಲ್ಕನೇ ದರ್ಜೆಯ ಅಧಿಕಾರಿ ವಾಂಗ್‌ ಹುನಿಂಗ್‌ರನ್ನ ಮೀಟ್‌ ಮಾಡಿದ್ದಾರೆ. ಭೇಟಿ ಬಳಿಕ ಮಾತನಾಡಿದ ನಾರ್ತ್‌ ಕೊರಿಯನ್‌ ನಿಯೋಗ, ʻಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ಇದಕ್ಕೆ ಚೀನಾ ಕೂಡ ಸಮ್ಮತಿ ನೀಡಿದೆʼ ಅಂತೇಳಿದೆ. ಜೊತೆಗೆ ʻಇಂಟರ್‌ನ್ಯಾಷನಲ್‌ ಸಿಚುವೇಷನ್‌ ಕಾಲಕ್ಕೆ ತಕ್ಕಂತೆ ಹೇಗ್‌ ಬೇಕಾದ್ರೂ ಬದಲಾಗ್ಬಹುದು. ಆದ್ರೆ ಚೀನಾ ಜೊತೆಗಿನ ನಮ್ಮ ಸ್ನೇಹ ಸಂಬಂಧ ಯಾವತ್ತೂ ಬದಲಾಗೋಕೆ ಸಾಧ್ಯವಿಲ್ಲʼ ಅಂತೇಳಿದೆ. ಈ ಮೂಲಕ ಚೀನಾ ಜೊತೆ ಇನ್ನಷ್ಟು ಕ್ಲೋಸ್‌ ಆಗೊ ಪ್ರಯತ್ನ ಮಾಡಿ ತನ್ನ ಶತ್ರು ರಾಷ್ಟ್ರಗಳಾದ ಸೌತ್‌ ಕೊರಿಯಾ ಹಾಗೂ ಅಮೆರಿಕಕ್ಕೆ ನಾರ್ತ್‌ ಕೊರಿಯಾ ಸ್ಟ್ರಾಂಗ್‌ ಮೆಸೇಜ್‌ ಪಾಸ್‌ ಮಾಡಿರೋ ರೀತಿ ಕಾಣಿಸ್ತಿದೆ.

-masthmagaa.com

Contact Us for Advertisement

Leave a Reply