ಉತ್ತರ ಕೊರಿಯಾದಲ್ಲಿ ಕೊರೊನಾ ಅಬ್ಬರ, 2 ಮಿಲಿಯನ್‌ ದಾಟಿದ ಪ್ರಕರಣಗಳು!

masthmagaa.com:

ಉತ್ತರ ಕೊರಿಯಾದಲ್ಲಿ ಕೊರೊನಾ ವೈರಸ್‌ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 20 ಲಕ್ಷ ಮೀರಿದೆ. ಹೊಸದಾಗಿ 2.63 ಲಕ್ಷ ಜ್ವರದ ಕೇಸ್‌ಗಳು ವರಿದಿಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಸೋ ಒಟ್ಟು ಮೃತಪಟ್ಟವರ ಸಂಖ್ಯೆ 65 ಕ್ಕೆ ಏರಿದೆ ಅಂತ ಅಲ್ಲಿನ ಸರ್ಕಾರಿ ಮಾಧ್ಯಮ ಹೇಳಿದೆ. ಆದ್ರೆ ಈ ಜ್ವರದ ಪ್ರಕರಣಗಳಲ್ಲಿ ಎಷ್ಟು ಜನ್ರು ಕೋವಿಡ್‌ ಪಾಸಿಟಿವ್‌ ಹೊಂದಿದ್ದಾರೆ ಅನ್ನೋದು ಸ್ಪಷ್ಟವಾಗಿ ವರದಿಯಾಗಿಲ್ಲ. ಆದ್ರೆ ಕಿಮ್‌ ಸರ್ಕಾರ ಮಾತ್ರ ವೈರಸ್‌ ವಿರುದ್ದದ ಹೋರಾಟದಲ್ಲಿ ದೇಶ ಉತ್ತಮ ಫಲಿತಾಂಶಗಳನ್ನ ಕಾಣ್ತಿದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply