ʻಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ರೆ ವಿಡಿಯೋ ಬಿಡುಗಡೆ ಮಾಡಿ ನೋಡೋಣʻ ಮತ್ತೊಬ್ಬ ಕಾಂಗ್ರೆಸ್‌ ನಾಯಕರಿಂದ ವಿವಾದಾತ್ಮಕ ಹೇಳಿಕೆ!

masthmagaa.com:

ಪಾಕ್ ಉಗ್ರರ ವಿರುದ್ಧ ಭಾರತ ಸೇನೆ ನಡೆಸಿದ್ದ ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಕಾಂಗ್ರೆಸ್‌ ನಾಯಕರ ಅನುಮಾನದ ಮಾತುಗಳು ಮುಂದುವರೆದಿದೆ. ಮೊನ್ನೆಯಷ್ಟೇ ದಿಗ್ವಿಜಯ ಸಿಂಗ್‌ ಸರ್ಜಿಕಲ್‌ ಸ್ಟ್ರೈಕ್‌ ನಡೆದಿದ್ರೆ ಅದಕ್ಕೆ ಆಧಾರ ಕೊಡಿ ಅಂತ ಹೇಳಿ ಭಾರಿ ಟೀಕೆಗೆ ಗುರಿಯಾಗಿದ್ರು. ಖುದ್ದು ಕಾಂಗ್ರೆಸ್‌ ಹಾಗೂ ಅದರ ನಾಯಕ ರಾಹುಲ್‌ ಗಾಂಧಿ ಇದರಿಂದ ಅಂತರ ಕಾದುಕೊಂಡಿದ್ರು. ಆದ್ರೆ ಈಗ ಒಂದು ಹೆಜ್ಜೆ ಮುಂದೆ ಹೋಗಿರೋ ಕಾಂಗ್ರೆಸ್‌ ನಾಯಕ ರಶೀದ್‌ ಅಲ್ವಿ, ಸರ್ಜಿಕಲ್‌ ಸ್ಟೈಕ್‌ ಮಾಡಿದ್ರೆ ವಿಡಿಯೋ ಬಿಡುಗಡೆ ಮಾಡಿ ಅಂತ ಕೇಳಿದ್ದಾರೆ. ನಮ್ಮ ಸೇನೆ ಬಗ್ಗೆ ನಮಗೆ ನಂಬಿಕೆ ಇದೆ. ನಾನು ಆ ಬಗ್ಗೆ ಪ್ರಶ್ನೆ ಮಾಡ್ತಾ ಇಲ್ಲ. ಆದ್ರೆ ಬಿಜೆಪಿ ಸರ್ಕಾರವನ್ನ ನಾವು ನಂಬೋದಿಲ್ಲ. ಅವತ್ತು ಸರ್ಕಾರದಲ್ಲಿ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರು ಯಾರೂ ಸಾಯುವ ಸಾಧ್ಯತೆ ಇಲ್ಲದ ಜಾಗದಲ್ಲಿ ದಾಳಿ ನಡೆಸಲಾಗಿದೆ ಅಂತ ಹೇಳಿದ್ರು. ಆ ಕಡೆ ದಾಳಿಯಲ್ಲಿ 300ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಅಂತ ಅಮಿತ್ ಶಾ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ 400ಕ್ಕೂ ಹೆಚ್ಚು ಉಗ್ರರು ಸತ್ತಿದ್ದಾರೆ ಅಂತ ಹೇಳಿದ್ದಾರೆ. ಸರ್ಕಾರ ತನ್ನ ಬಳಿ ಸರ್ಜಿಕಲ್‌ ಸ್ಟೈಕ್‌ನ ವಿಡಿಯೋ ಇದೆ ಅಂತ ಹೇಳ್ತಾ ಇದೆ. ಹಾಗಾದ್ರೆ ಅದನ್ನ‌ ತೋರಿಸಿ..ದಿಗ್ವಿಜಯ ಸಿಂಗ್‌ ಪ್ರಶ್ನೆ ಮಾಡಿದ್ರಲ್ಲಿ ಏನ್‌ ತಪ್ಪು ಅಂತ ಅವರನ್ನ ಸಮರ್ಥನೆ ಮಾಡಿಕೊಂಡಿದ್ದಾರೆ. ಇತ್ತ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರೋ ಕಾಂಗ್ರೆಸ್‌ನ ಮಿತ್ರ ಪಕ್ಷ ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಒಮರ್‌ ಅಬ್ದುಲ್ಲಾ, ಅದೆಲ್ಲಾ ಕಾಂಗ್ರೆಸ್‌ನ ಆಂತರಿಕ ವಿಚಾರ.. ನಾವು ಸೇನೆಯ ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಪ್ರಶ್ನೆ ಮಾಡಲ್ಲ. ಮಾಡೋದಕ್ಕೂ ಹೋಗಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply