ಆ ವ್ಯಕ್ತಿ 2 ಡೋಸ್ ಕೋವ್ಯಾಕ್ಸಿನ್ ಪಡೆದ್ರೂ ಕೋವಿಶೀಲ್ಡ್​ ಬೇಕು ಅಂತಿರೋದ್ಯಾಕೆ?

masthmagaa.com:

ಕೊವಾಕ್ಸಿನ್​ ಲಸಿಕೆಯ ಎರಡೂ ಡೋಸ್​​ ಹಾಕಿಸಿಕೊಂಡಿದ್ದ ಕೇರಳದ ಕಣ್ಣೂರು ಮೂಲದ ವ್ಯಕ್ತಿಯೊಬ್ಬ ಇತ್ತೀಚೆಗೆ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದ. ನಂಗೆ ಕೋವಾಕ್ಸಿನ್ ಲಸಿಕೆ ಹಾಕಿದ್ದಾರೆ. ಆದ್ರೆ ಈ ಲಸಿಕೆಗೆ ಸೌದಿ ಅರೇಬಿಯಾ ಸರ್ಕಾರ ಅನುಮೋದನೆ ಕೊಟ್ಟಿಲ್ಲ. ಹೀಗಾಗಿ ನಾನು ಎರಡೂ ಡೋಸ್​ ಲಸಿಕೆ ಹಾಕಿಸಿದ್ರೂ ಕೆಲಸಕ್ಕಾಗಿ ಸೌದಿಗೆ ಹೋಗಲು ಆಗ್ತಿಲ್ಲ. ದಯವಿಟ್ಟು ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಮಾಡಿಕೊಡಿ ಅಂತ ಮನವಿ ಮಾಡಿದ್ದ. ಈ ಬಗ್ಗೆ ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಕೊಡುವಂತೆ ತಿಳಿಸಿತ್ತು. ಇದೀಗ ಕೇಂದ್ರ ಸರ್ಕಾರ ಎರಡೂ ಡೋಸ್​ ಲಸಿಕೆ ಹಾಕ್ಕೊಂಡೋರಿಗೆ ಮತ್ತೆ ಲಸಿಕೆ ಹಾಕಲು ಸಾಧ್ಯವಿಲ್ಲ ಅಂತ ಕೇರಳ ಹೈಕೋರ್ಟ್​​ಗೆ ಹೇಳಿದೆ.

-masthmagaa.com

Contact Us for Advertisement

Leave a Reply