ಯುಎಸ್‌ ಓಪನ್‌: 24ನೇ ಗ್ರ್ಯಾಂಡ್‌ ಸ್ಲ್ಯಾಮ್‌ ಗೆದ್ದು ದಾಖಲೆ ಸೃಷ್ಟಿಸಿ ನೋವಾಕ್‌ ಜೊಕೊವಿಕ್‌

masthmagaa.com:

ಸರ್ಬಿಯಾದ ಟೆನಿಸ್‌ ತಾರೆ ನೋವಾಕ್‌ ಜೊಕೊವಿಕ್‌ ಅವ್ರು ಡೇವಿಡ್‌ ಮೆಡ್ವೆಡೆವ್‌ ಅವರನ್ನ ಸೋಲಿಸಿ 2023ರ ಯುಎಸ್‌ ಓಪನ್‌ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ತಮ್ಮ ವೃತ್ತಿಜೀವನದಲ್ಲಿ 24ನೇ ಗ್ರ್ಯಾಂಡ್‌ ಸ್ಲ್ಯಾಮ್‌ ಗೆದ್ದು ದಾಖಲೆ ಸೃಷ್ಟಿಸಿದ್ದಾರೆ. ಇದು ಜೊಕೊವಿಕ್‌ ಅವರ ನಾಲ್ಕನೇ ಯುಎಸ್‌ ಓಪನ್‌ ಪ್ರಶಸ್ತಿಯಾಗಿದೆ. ಅಂದ್ಹಾಗೆ ಸೆರೆನಾ ವಿಲಿಯಮ್ಸ್ ಅವರ 23 ಸಿಂಗಲ್ಸ್ ಟ್ರೋಫಿ ಗೆಲ್ಲುವ ಮೂಲಕ ಸೃಷ್ಟಿಸಿದ್ದ ಅತಿಹೆಚ್ಚು ಗ್ರ್ಯಾಂಡ್‌ ಸ್ಲ್ಯಾಮ್‌ ಪ್ರಶಸ್ತಿ ಗೆಲುವಿನ ದಾಖಲೆಯನ್ನ ನೊವಾಕ್, ಮುರಿದಿದ್ದಾರೆ. ಅಷ್ಟೆ ಅಲ್ದೆ ಸಾರ್ವಕಾಲಿಕ ಅತಿ ಹೆಚ್ಚು ಅಂದ್ರೆ 24 ಸಿಂಗಲ್ಸ್ ಟ್ರೋಫಿ, ಗ್ರ್ಯಾಂಡ್‌ ಸ್ಲ್ಯಾಮ್‌ ಗೆದ್ದಿರುವ ಅಮೆರಿಕದ ಮಾರ್ಗರೇಟ್ ಕೋರ್ಟ್ ಅವರ ಸಾಲಿಗೆ ನೋವಾಕ್‌ ಸೇರ್ಪಡೆಗೊಂಡಿದ್ದಾರೆ. ಇತ್ತ ಯುಎಸ್‌ ಓಪನ್‌ ಮಹಿಳಾ ವಿಭಾಗದಲ್ಲಿ ಅಮೆರಿಕದ 19 ವರ್ಷದ ಕೊಕೊ ಗಾಫ್‌ ಮೊದಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply