ODI ವಲ್ಡ್‌ ಕಪ್‌: ಅಫ್ಘಾನಿಸ್ತಾನ ಪಂದ್ಯಕ್ಕೂ ಶುಭಮನ್‌ ಅಲಭ್ಯ

masthmagaa.com:

ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಭಾರತ ತಂಡದ ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಅವರು ಅಕ್ಟೋಬರ್‌ 11ರಂದು ಅಂದ್ರೆ ನಾಳೆ ನಡೆಯಲಿರುವ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಕದಿನ ವಿಶ್ವಕಪ್‌ ಪಂದ್ಯಾಟದಿಂದ ಹೊರಗುಳಿದಿದ್ದಾರೆ. ಈಗಾಗಲೇ ಅನಾರೋಗ್ಯದಿಂದ ಭಾನುವಾರದಂದು ಚೆನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಗೈರಾಗಿದ್ದರು. ಸಧ್ಯ ಅವರ ಪ್ಲೇಟ್‌ಲೆಟ್‌ ಕೌಂಟ್‌ 70,000ಕ್ಕೆ ಕುಸಿದಿದ್ದು, ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು BCCI ಮೂಲದಿಂದ ತಿಳಿದು ಬಂದಿದೆ. ಸಹಜವಾಗಿ ಪ್ರತಿಯೊಬ್ಬರಲ್ಲೂ 1.5 ಲಕ್ಷ ಪ್ಲೇಟ್‌ಲೆಟ್‌ ಕೌಂಟ್‌ ಇರತಕ್ಕದ್ದು. 1 ಲಕ್ಷಕ್ಕಿಂತ ಕಡಿಮೆ ಪ್ಲೇಟ್‌ಲೆಟ್‌ ಕೌಂಟ್‌ ಕುಸಿದಲ್ಲಿ, ಮುನ್ನಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಇದೀಗ ವೈದ್ಯಕೀಯ ತಂಡ ಅವರ ಆರೋಗ್ಯದ ಕಾಳಜಿಯನ್ನ ವಹಿಸುತ್ತಿದ್ದಾರೆ. ಡೆಂಗ್ಯೂ ಜ್ವರದಿಂದ ಗುಣಮುಖರಾಗಲು ಇನ್ನೂ ಕೆಲ ದಿನಗಳು ಬೇಕಾಗಿರುವ ಕಾರಣದಿಂದ ಮುಂದಿನ ಭಾನುವಾರ ನಡೆಯಲಿರುವ ಪಾಕ್‌ ವಿರುದ್ಧದ ಪಂದ್ಯಕ್ಕೂ ಶುಭಮನ್‌ ಗಿಲ್‌ ಕಣಕ್ಕಿಳಿಯುವುದು ಅನುಮಾನವೆಂಬಂತಿದೆ.

-masthmagaa.com

Contact Us for Advertisement

Leave a Reply