ಸಾರ್ವಜನಿಕ ಆಸ್ತಿ ಹಾನಿ ತಡೆಯಲು ಹೊಸ ತಿದ್ದುಪಡಿ: ಕಾನೂನು ಆಯೋಗ

masthmagaa.com:

ಪ್ರತಿಭಟನೆಗಳ ಹೆಸರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡೋ ದುಷ್ಕರ್ಮಿಗಳ ವಿರುದ್ದ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ಕಾನೂನು ಆಯೋಗ ಹೊಸ ಕಾನೂನು ಆಗಬೇಕು ಅಂತ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಇದ್ರ ಪ್ರಕಾರ ಯಾವೊಬ್ಬ ವ್ಯಕ್ತಿ ಅಥ್ವಾ ಸಂಸ್ಥೆ, ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗಳಿಗೆ ಹಾನಿ ಮಾಡಿದ್ರೆ ಭಾರೀ ದಂಡ ವಿಧಿಸಲಾಗುತ್ತೆ. ಎಷ್ಟು ಪ್ರಮಾಣದಲ್ಲಿ ಹಾನಿ ಮಾಡಿದ್ರೋ, ಅದಕ್ಕೆ ಸಮನಾದ ಹಣ ಡೆಪಾಸಿಟ್‌ ಮಾಡಿದ್ರೇನೇ ಅಂಥವ್ರಿಗೆ ಜಾಮೀನು ನೀಡಬೇಕು, ಅಂತಹ ಕಾನೂನು ತರಬೇಕು ಅಂತ ಲಾ ಕಮಿಷನ್‌ ಶಿಫಾರಸ್ಸು ಸಲ್ಲಿಸಿದೆ. ಇನ್ನು ಹಾನಿಗೊಳಗಾದ ಆಸ್ತಿಯನ್ನ ಹಣದ ಮೂಲಕ ಬೆಲೆಕಟ್ಟೋಕೆ ಆಗದ ಪಕ್ಷದಲ್ಲಿ, ಕೋರ್ಟ್‌ ಹಸ್ತಕ್ಷೇಪ ಮಾಡಬೇಕು. ಆಸ್ತಿ ಹಾನಿ ಪ್ರಕರಣದ ಸತ್ಯ ಮತ್ತು ಸಂದರ್ಭಗಳನ್ನ ಸೂಕ್ಷ್ಮವಾಗಿ ಗಮನಿಸಿ, ಸರಿಯಾದ ಲೆಕ್ಕಚಾರ ಮಾಡಿ ಒಂದು ಮೊತ್ತವನ್ನ ಫಿಕ್ಸ್‌ ಮಾಡಬೇಕು ಅಂತ ಹೇಳಲಾಗಿದೆ. ಇನ್ನು ಕಾನೂನು ಆಯೋಗದ ಈ ರಿಪೋರ್ಟ್‌ನಲ್ಲಿ ಮಾನವ ಹಕ್ಕುಗಳ ಸಂಘಟನೆ ಮತ್ತು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಕೂಡ ನೀಡಲಾಗಿದೆ. ಎಲ್ಲಾ ಸಮಯದಲ್ಲೂ, ತಮ್ಮ ಹಕ್ಕುಗಳನ್ನ ಸಂಯಮದಿಂದ ಮತ್ತು ಶಾಂತಿಯುತವಾಗಿ ಚಲಾಯಿಸೋ ಅಗತ್ಯವಿದೆ ಅಂತ ವಾರ್ನ್‌ ಮಾಡಿದೆ. ಅಷ್ಟೇ ಅಲ್ದೇ ಈ ರಿಪೋರ್ಟ್‌ನಲ್ಲಿ 1984ರ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯಿದೆ ಬಗ್ಗೇನೂ ಉಲ್ಲೇಖಿಸಲಾಗಿದೆ. ಅಂದ್ಹಾಗೆ ಈ ಕಾನೂನನ್ನ ಪಾಸ್‌ ಮಾಡಿದ್ರೂ ಕೂಡ ಯಾವ್ದೇ ರೀತಿ ಪ್ರಯೋಜನವಾಗಿಲ್ಲ. ಸಾರ್ವಜನಿಕ ಆಸ್ತಿ ಹಾನಿಯಾಗೋದು ಕಂಟಿನ್ಯೂ ಆಗಿದೆ. ಆದ್ರಿಂದ ಸುಪ್ರೀಂ ಕೋರ್ಟ್‌ ಈ ಬಗ್ಗೆ ಸ್ವಯಂ ಪ್ರೇರಿತವಾಗಿ ಕ್ರಮ ತೆಗೆದುಕೊಳ್ಳೋಕೆ ಮುಂದಾಗಿತ್ತು. ನಂತ್ರ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಮಸೂದೆಯ ಡ್ರಾಫ್ಟ್‌ನ್ನ 2015ರಲ್ಲಿ ಗೃಹ ಸಚಿವಾಲಯ ರಿಲೀಸ್‌ ಮಾಡಿತ್ತು. ಹಾಗಿದ್ರೂ ಯಾವುದೇ ಪ್ರಯೋಜನೆ ಆಗಿಲ್ಲ. ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಜಾಸ್ತಿಯಾಗ್ತಾನೇ ಹೋಯ್ತು. ರಾಜಕೀಯ ಪಕ್ಷಗಳ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ನಡೆಸಿ, ಪ್ರಮುಖ ರಸ್ತೆಗಳನ್ನ ಬ್ಯಾಕ್‌ ಟು ಬ್ಯಾಕ್‌ ಬ್ಲಾಕ್‌ ಮಾಡ್ತಿದ್ವು. ಅಲ್ಲದೆ ಕಲ್ಲು ತೂರಾಟ ನಡೆಸಿದ್ವು. ಪರಿಣಾಮ ಸಾರ್ವಜನಿಕರಿಗೆ ಭಾರೀ ನಷ್ಟ ಉಂಟಾಗಿ ತೊಂದರೆಯಾಗಿತ್ತು. ಹೀಗಾಗಿ ಇದರ ವಿರುದ್ದ ಕಠಿಣ ಕ್ರಮ ತಗೋಬೇಕು ಅಂತ ಲಾ ಕಮಿಷನ್‌ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

-masthmagaa.com

Contact Us for Advertisement

Leave a Reply