ರೇಸ್ ಕುದುರೆಯಂತೆ ಓಡ್ತಿದೆ ಪೆಟ್ರೋಲ್, ಡೀಸೆಲ್ ರೇಟು!

masthmagaa.com:

ದೇಶದಲ್ಲಿ ಪೆಟ್ರೋಲ್, ಡೀಸೆಲ್ ರೇಟು ದಿನೇ ದಿನೇ ಜಾಸ್ತಿಯಾಗ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಜೂನ್ ಮಧ್ಯಭಾಗದಲ್ಲಿ ನೂರರ ಗಡಿ ದಾಟಿದ ಪೆಟ್ರೋಲ್ ದರ ಇನ್ನೂ ಇಳಿಕೆಯಾಗಿಲ್ಲ. ಸದ್ಯ 1 ಲೀಟರ್ ಪೆಟ್ರೋಲ್​​​ಗೆ 104 ರೂಪಾಯಿ 29 ಪೈಸೆಯಷ್ಟಿದೆ. ಅದೇ ಡೀಸೆಲ್ ದರ 95 ರೂಪಾಯಿ 26 ಪೈಸೆಯಾಗಿದೆ. ಒಂದ್ಕಡೆಯಿಂದ ಕೊರೋನಾ ಲಾಕ್​​ಡೌನ್​ ಬರೆ.. ಅದ್ರಿಂದ ಹೊರಬರುತ್ತಿರುವ ಜನರಿಗೆ ತೈಲ ದರ ಏರಿಕೆಯ ಬರೆ.. ಇದ್ರಿಂದ ಪರದಾಡ್ತಿರೋದು ಮಾತ್ರ ಜನ. ಇನ್ನು ಇದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿರೋ ಓಂ ಪ್ರಕಾಶ್ ಸಕ್ಲೇಚಾ, ಜೀವನದಲ್ಲಿ ಸಮಸ್ಯೆ ಮತ್ತು ತೊಂದ್ರೆಗಳೇ ಆನಂದದ ಅನುಭವ ನೀಡುತ್ತವೆ. ದುಃಖವೇ ಇಲ್ಲದಿದ್ರೆ ಸುಃಖದ ಅನುಭವ ಆಗೋದೇ ಇಲ್ಲ ಅಂತ ಹೇಳಿಕೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply