ದೇಶದಲ್ಲಿ ಒಮೈಕ್ರಾನ್​ ಆತಂಕ ತೀವ್ರ! ನಾಳೆ ಪ್ರಧಾನಿ ಮೋದಿ ಸಭೆ

masthmagaa.com:

ದೇಶದಲ್ಲಿ ಒಮೈಕ್ರಾನ್​ ಆತಂಕ ಹೆಚ್ಚಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 213ಕ್ಕೆ ಏರಿಕೆಯಾಗಿದೆ. ಅತಿಹೆಚ್ಚು ಕೇಸ್​ ದೃಢಪಟ್ಟ ರಾಜ್ಯಗಳಲ್ಲಿ ಮಹಾರಾಷ್ಟ್ರವನ್ನ ಮೀರಿಸಿ ದೆಹಲಿ ಮೊದಲ ಸ್ಥಾನಕ್ಕೆ ಹೋಗಿದೆ. ದೆಹಲಿಯಲ್ಲಿ 57, ಮಹಾರಾಷ್ಟ್ರದಲ್ಲಿ 54 ಒಮೈಕ್ರಾನ್​ ರೂಪಾಂತರಿ ದೃಢಪಟ್ಟಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಮತ್ತೊಂದು ವಿಚಾರ ಅಂದ್ರೆ ದೆಹಲಿಯಲ್ಲಿ ಕೊರೋನಾ ಕೇಸ್​​ ಕೂಡ ನಿಧಾನವಾಗಿ ಜಾಸ್ತಿಯಾಗ್ತಿದೆ. ಇವತ್ತು 125 ಕೊರೋನಾ ಕೇಸ್​ ವರದಿಯಾಗಿದೆ. ಕಳೆದ 6 ತಿಂಗಳಲ್ಲಿ ದೃಢಪಟ್ಟ ಹೈಯೆಸ್ಟ್ ಕೇಸ್​ ಇದು. ಇದರ ಬೆನ್ನಲ್ಲೇ ಕ್ರಿಸ್​ಮಸ್​​ ಮತ್ತು ನ್ಯೂ ಇಯರ್​ಗೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸದಂತೆ, ಜನ ಸೇರದಂತೆ ದೆಹಲಿ ಸರ್ಕಾರ ನಿಷೇಧ ಹೇರಿದೆ. ಇನ್ನು ಕೇರಳದಲ್ಲಿ ಇವತ್ತು 9 ಮತ್ತು ರಾಜಸ್ಥಾನದಲ್ಲಿ ನಾಲ್ಕು ಒಮೈಕ್ರಾನ್​ ಕೇಸ್​ ದೃಢಪಟ್ಟಿದೆ. ಅತ್ತ ಪಂಜಾಬ್​ನಲ್ಲಿ ವ್ಯಾಕ್ಸಿನೇಷನ್​ ಸರ್ಟಿಫಿಕೆಟ್​ ಇಲ್ಲದ ಸರ್ಕಾರಿ ನೌಕರರಿಗೆ ಸ್ಯಾಲರಿ ಕೂಡ ಹಾಕಲ್ಲ ಅಂತ ಸರ್ಕಾರ ಹೇಳಿದೆ. ಹರಿಯಾಣದಲ್ಲಿ ಎರಡು ಡೋಸ್​ ಕೊರೋನಾ ಲಸಿಕೆಯನ್ನ ಕಡ್ಡಾಯ ಮಾಡಲಾಗಿದೆ. ಎರಡು ಡೋಸ್​ ಕೊರೋನಾ ಲಸಿಕೆ ಹಾಕಿಸಿಕೊಳ್ಳದವರನ್ನ ಜನವರಿ 1ನೇ ತಾರೀಖಿನಿಂದ, ಮದ್ವೆ ಹಾಲ್​, ಹೋಟೆಲ್​, ಬ್ಯಾಂಕ್, ಬಸ್​​ಗಳ ಒಳಗೆ ಬಿಟ್ಟುಕೊಳ್ಳುವುದಿಲ್ಲ ಅಂತ ಹರಿಯಾಣ ಆರೋಗ್ಯ ಸಚಿವ ಎಚ್ಚರಿಸಿದ್ಧಾರೆ. ಇನ್ನು ಒಮೈಕ್ರಾನ್​ ರೂಪಾಂತರಿ ಭೀತಿ ನಡುವೆಯೇ ನಾಳೆ ಪ್ರಧಾನಿ ಮೋದಿ ದೇಶದ ಕೊರೋನಾ ಪರಿಸ್ಥಿತಿ ಬಗ್ಗೆ ಸಭೆ ನಡೆಸಲಿದ್ದಾರೆ ಅಂತ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply