ಹಾವಿನ ಬಾಯಿಗೆ ಬಾಯಿ ಹಾಕಿ ಹಾವನ್ನೇ ಬದುಕಿಸಿದ ಭೂಪ! ಪೊಲೀಸ್‌ ಪೇದೆಯ ಕಾರ್ಯಕ್ಕೆ ಶಬ್ಬಾಶ್‌ಗಿರಿ!

masthmagaa.com:

ಪ್ರಜ್ಞೆ ತಪ್ಪಿ ಬಿದಿದ್ದ ಕೇರೆ ಹಾವೊಂದಕ್ಕೆ ಪೊಲೀಸ್ ಕಾನ್ಸ್‌ಟೆಬಲ್ ಒಬ್ರು ತಮ್ಮ ಬಾಯಿಂದ ಕೃತಕ ಉಸಿರಾಟ ನೀಡಿ ಜೀವ ಉಳಿಸಿರುವ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ನರ್ಮದಾಪುರಂನ ಅತುಲ್‌ ಶರ್ಮ ಎಂಬ ಪೊಲೀಸ್ ಸಿಬ್ಬಂದಿ ರಾಸಾಯನಿಕ ಕೀಟನಾಶಕ ವಾಸನೆಗೆ ಪ್ರಜ್ಞೆ ತಪ್ಪಿ ಬಿದಿದ್ದ ಹಾವಿಗೆ CPR ಅಂದರೆ Cardiopulmonary Resuscitation ಮಾಡಿ ಜೀವ ಉಳಿಸಿದ್ದಾರೆ. ಜನ ವಸತಿ ಪ್ರದೇಶಕ್ಕೆ ನುಗ್ಗಿದ್ದ ಈ ಹಾವನ್ನ ಓಡಿಸಲು ಸಾರ್ವಜನಿಕರು ಕ್ರಿಮಿನಾಶಕ ಬಳಸಿದ್ದಾರೆ. ಅದರ ವಾಸನೆಗೆ ಹಾವು ಪ್ರಜ್ಞೆ ಕಳೆದುಕೊಂಡಿದೆ. ಸ್ಥಳಕ್ಕೆ ಬಂದ ಅತುಲ್‌ ಶರ್ಮ ಮೊದಲು ಹಾವನ್ನು ನೋಡಿದ್ದಾರೆ. ಬಳಿಕ ಅದು ಜೀವಂತವಾಗಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಹಾವಿನ ಬಾಯಿಗೆ ತಮ್ಮ ಬಾಯಿ ಇಟ್ಟು ಸಿಪಿಆರ್‌ ಮಾಡಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಹಾವು ಚೇತರಿಸಿಕೊಂಡಿದೆ. ಅಂದ್ಹಾಗೆ ಅತುಲ್‌ ಶರ್ಮ ಡಿಸ್ಕವರಿ ಚಾನೆಲ್ ನಲ್ಲಿ ಹಾವಿಗೆ ಸಿಪಿಆರ್ ಮಾಡೋದನ್ನ ನೋಡಿ, ಅದನ್ನು ಇಲ್ಲಿ ಪ್ರಯೋಗ ಮಾಡಿ ಹಾವಿನ ಜೀವ ಉಳಿಸಿದ್ದಾರೆ. ಇವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

masthmagaa.com

Contact Us for Advertisement

Leave a Reply