ಟಿ20 ವಿಶ್ವಕಪ್​​: ಭಾರತದ ತಂಡಕ್ಕೆ ಧೋನಿ ಮೆಂಟರ್​! ವಿವಾದ.. ಯಾಕೆ?

masthmagaa.com:

ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ಯುಎಇ ಮತ್ತು ಒಮನ್​​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಪಂದ್ಯಾವಳಿಗೆ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿಯನ್ನು ಮೆಂಟರ್ ಆಗಿ ಕರೆದುಕೊಂಡು ಹೋಗಲು ಬಿಸಿಸಿಐ ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಬಿಸಿಸಿಐ ಸೆಕ್ರೆಟರಿ ಜೈ ಶಾ, ಈ ಬಗ್ಗೆ ನಾವು ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಬಳಿ ಅನುಮತಿ ಪಡೆದಿದ್ದೀವಿ ಅಂತ ಹೇಳಿದ್ದಾರೆ. ಆದ್ರೆ ಇದ್ರ ವಿರುದ್ಧ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಲೈಫ್ ಮೆಂಬರ್​ ಸಂಜೀವ್ ಗುಪ್ತಾ ದೂರು ದಾಖಲಿಸಿದ್ದು, ಲೋಧಾ ಕಮಿಟಿ ಶಿಫಾರಸು ಪ್ರಕಾರ ಇದು ಹಿತಾಸಕ್ತಿಯ ಸಂಘರ್ಷಕ್ಕೆ ಕಾರಣವಾಗಲಿದೆ ಅಂತ ಆರೋಪಿಸಿದ್ದಾರೆ. ಯಾಕಂದ್ರೆ ಒಬ್ಬರು 2 ಹುದ್ದೆ ಹೊಂದುವಂತಿಲ್ಲ. ಆದ್ರೆ ಧೋನಿ ಈಗಾಗಲೇ ಐಪಿಎಲ್​​​ನಲ್ಲಿ ಚೆನ್ನೈ ಸೂಪರ್ ಕಿಂಗ್ ತಂಡದ ನಾಯಕನಾಗಿದ್ದು, ಇದ್ರ ನಡುವೆ ಟಿ20 ವಿಶ್ವಕಪ್​ ತಂಡದ ಮೆಂಟರ್ ಆಗಿ ಆಯ್ಕೆ ಮಾಡಿದ್ರೆ ಹಿತಾಸಕ್ತಿ ಸಂಘರ್ಷ ಆಗಲಿದೆ ಅನ್ನೋದು ಅವರ ಆರೋಪ.

-masthmagaa.com

Contact Us for Advertisement

Leave a Reply