ಕಾವೇರಿ ಕೊಳ್ಳದಲ್ಲಿ ತೈಲ ಬಗೆಯೋಗೆ ONGC ಚಿಂತನೆ!

masthmagaa.com:

ತೈಲ್‌ ಮತ್ತು ನೈಸರ್ಗಿಕ ಅನಿಲ ಕಂಪನಿ ONGC ಲಿಬಿಯಾದಲ್ಲಿ ಮತ್ತೆ ತನ್ನ ಕಾರ್ಯಾಚರಣೆ ಶುರು ಮಾಡೋಕೆ ಮುಂದಾಗಿದೆ. ಅಲ್ಲದೆ ವೆನೆಜುಯೆಲ್ಲಾದಲ್ಲೂ ತನ್ನ ಉತ್ಪಾದನೆ ಜಾಸ್ತಿ ಮಾಡೋ ಬಗ್ಗೆ ಮಾತುಕತೆ ನಡೆಸಿದೆ. ಲಿಬಿಯಾದಲ್ಲಿ ರಾಜಕೀಯ ಅಸ್ಥಿರತೆ ಉಂಟಾದ್ಮೇಲೆ 2011ರ ಟೈಮಲ್ಲಿ ONGC ತನ್ನ ಆಪರೇಷನ್‌ಗಳನ್ನ ನಿಲ್ಸಿತ್ತು. ಆದ್ರೆ ಇದೀಗ ಮತ್ತೊಮ್ಮೆ ಅಲ್ಲಿಗೆ ಎಂಟ್ರಿ ಕೊಡೋಕೆ ಸಜ್ಜಾಗಿದೆ. ಅಷ್ಟೇ ಅಲ್ಲದೆ ONGC ಅಂಡಮಾನ್‌ ದ್ವೀಪಗಳು ಹಾಗೂ ಕಾವೇರಿ ಡೆಲ್ಟಾ ಅಥ್ವಾ ನದಿ ಮುಖಜಭೂಮಿಯಲ್ಲಿ.. ಅಂದ್ರೆ ತಮಿಳುನಾಡಿನಲ್ಲಿ ತೈಲ ಸಂಶೋಧನೆ ಮಾಡೋಕೆ ಮುಂದಾಗಿದೆ ಅಂತ ONGCಯ ತೈಲ ಪರಿಶೋಧನೆ ಡೈರೆಕ್ಟರ್‌ ಸುಶ್ಮಾ ರಾವತ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply