ರಾಜ್ಯದ ಜನರ ಕಣ್ಣೀರಿಗೆ ಕಾರಣವಾದ ಈರುಳ್ಳಿ ಬೆಲೆ!

masthmagaa.com:

ಇತ್ತೀಚೆಗಷ್ಟೇ ಟೊಮೆಟೋ ಬೆಲೆ ಗಗನಕ್ಕೇರಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿತ್ತು. ಇದೀಗ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಜನರ ಕಣ್ಣೀರಿಗೆ ಕಾರಣವಾಗಿದೆ. ರಾಜ್ಯದಲ್ಲಿ ಈರುಳ್ಳಿಯ ಹೋಲ್‌ಸೇಲ್‌ ಮತ್ತು ರಿಟೇಲ್‌ ದರ ನೆನ್ನೆ ಭಾನುವಾರದಂದು ಪ್ರತಿ ಕೆಜಿಗೆ 70 ರೂಪಾಯಿಯಾಗಿದೆ. ಆದ್ರೆ ಒಂದು ವಾರದ ಹಿಂದೆ ಕರ್ನಾಟಕದಲ್ಲಿ ಈರುಳ್ಳಿಯ ಹೋಲ್‌ಸೇಲ್‌ ಬೆಲೆ 50 ಮತ್ತು ರಿಟೇಲ್‌ ಬೆಲೆ 39 ಇತ್ತು. ಆದ್ರೆ ಇದೀಗ ಕೇವಲ ಒಂದೇ ವಾರದಲ್ಲಿ ಈರುಳ್ಳಿ ಬೆಲೆ ಏರಿಕೆ ಕಂಡಿದ್ದು, ವಾರಾಂತ್ಯದಲ್ಲಿ 100 ರೂಪಾಯಿ ಗಡಿ ದಾಟುವ ಸಾಧ್ಯತೆಗಳಿವೆ ಅಂತ ಹೇಳಲಾಗ್ತಾ ಇದೆ. ಅಂದ್ಹಾಗೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಉಂಟಾದ ಭೀಕರ ಬರದಿಂದ, ಈರುಳ್ಳಿಯ ಬೆಲೆಯಲ್ಲಿ ಏರಿಕೆಯಾಗ್ತಾ ಇದೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply