ಕತ್ತರಿಸೋ ಮುನ್ನವೇ ಕಣ್ಣೀರು ತರಿಸಲಿದೆ ಈರುಳ್ಳಿ: ದೀಪಾವಳಿಗೆ ₹100 ತಲುಪಲಿದೆಯಾ ಈರುಳ್ಳಿ ಬೆಲೆ?

masthmagaa.com:

ರಾಜ್ಯದಲ್ಲಿ ಮಳೆ ಕೊರತೆಯ ಬಿಸಿ ತಟ್ಟಲು ಪ್ರಾರಂಭವಾಗಿದೆ. ವಿದ್ಯುತ್‌ ಅಭಾವದ ಸಮಸ್ಯೆ ಇರುವಾಗ್ಲೆ ಈಗ ಕೃಷಿ ಉತ್ಪನ್ನಗಳ ಮೇಲೂ ಒಂದೊಂದಾಗಿ ಪರಿಣಾಮ ಬೀರೊ ತರ ಇದೆ. ದೀಪಾವಳಿ ವೇಳೆಗೆ ಈರುಳ್ಳಿ ಬೆಲೆ 100 ತಲುಪಲಿದೆ ಅಂತ ಅಂದಾಜು ಮಾಡಲಾಗ್ತಿದೆ. ರಾಜ್ಯಾದ್ಯಾಂತ ಕಳೆದ ಹತ್ತು ದಿನಗಳಿಂದ ಈರುಳ್ಳಿ ಪೂರೈಕೆಯಲ್ಲಿ ದಿಢೀರ್ ಇಳಿಕೆಯಾಗಿದೆ ಅಂತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಅಧಿಕಾರಿಗಳು ಮತ್ತು ಚಿಲ್ಲರೆ ಮಾರಾಟಗಾರರು ತಿಳಿಸಿದ್ದಾರೆ. ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರಿನ ಯಶವಂತಪುರ APMC ಮಾರುಕಟ್ಟೆಗಳಲ್ಲಿ ಕಳೆದ 15 ದಿನದ ಹಿಂದೆ ಇದ್ದ ಬೆಲೆಗಿಂತ ಈಗ ಈರುಳ್ಳಿ ಬೆಲೆ ಡಬಲ್ ಆಗಿದ್ದು, ಸದ್ಯ ಬೆಂಗಳೂರಿನಲ್ಲಿ ಕೆಜಿಗೆ 70 ರೂಪಾಯಂತೆ ಈರುಳ್ಳಿ ಸಿಕ್ತಿದೆ. ಬರೋ ದಿನಗಳಲ್ಲಿ 100ರ ಗಡಿ ದಾಟೋದು ಕನ್ಫರ್ಮ್‌ ಎನ್ನಲಾಗ್ತಿದೆ.

-amsthmagaa.com

Contact Us for Advertisement

Leave a Reply