ರಷ್ಯಾದಲ್ಲಿ‌ ಆನ್‌ಲೈನ್‌ ವೋಟಿಂಗ್:‌ ಮತ್ತೆ ಪುಟಿನ್‌ ಸಾಮ್ರಾಜ್ಯ?

masthmagaa.com:

ರಷ್ಯಾದಲ್ಲಿ ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಆನ್‌ಲೈನ್‌ ವೋಟಿಂಗ್‌ ನಡೀತಿದೆ. ಇಂದಿನಿಂದ ಮೂರು ದಿನಗಳ ಕಾಲ ಅಂದ್ರೆ ಮಾರ್ಚ್‌ 15ರಿಂದ 17ರವೆರೆಗೆ ರಷ್ಯಾದಲ್ಲಿ ಮತದಾನ ನಡೆಯಲಿದೆ. ಪ್ರಮುಖವಾಗಿ ಈ ಬಾರಿಯೂ ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗಿರೋ ಪುಟಿನ್‌, 5ನೇ ಬಾರಿ ರಷ್ಯಾಧ್ಯಕ್ಷರಾಗೋದು ಬಹುತೇಕ ಫಿಕ್ಸ್‌ ಎನ್ನಲಾಗಿದೆ. ಈ ಮೂಲಕ ಜೊಸೆಫ್‌ ಸ್ಟಾಲಿನ್‌ ಬಳಿಕ ಧೀರ್ಘ ಕಾಲ ರಷ್ಯಾವನ್ನಾಳಿದ ಹೆಗ್ಗಳಿಕೆಗೆ ಪುಟಿನ್‌ ಪಾತ್ರರಾಗಲಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಇನ್ನು ಪುಟಿನ್‌ಗೆ ಎದುರಾಳಿಯಾಗಿ ಮೂವರು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ರೂ ಪುಟಿನ್‌ ಗೆಲುವಿನ ಯಾವುದೇ ಅಡ್ಡಿಯಾಗಲ್ಲ ಅಂತೇಳಲಾಗ್ತಿದೆ. ಅಂದ್ಹಾಗೆ ರಷ್ಯಾದ 27 ಪ್ರಾಂತ್ಯಗಳು ಹಾಗೂ ಯುಕ್ರೇನ್‌ನಿಂದ ವಶಪಡಿಸಿಕೊಂಡ ಕ್ರೈಮಿಯಾ ಸೇರಿದಂತೆ ರಷ್ಯಾ ಸ್ವಾಧೀನಪಡಿಸಿಕೊಂಡ ವಿವಿಧ ಪ್ರದೇಶಗಳಲ್ಲೂ ಮತದಾನ ನಡೆಯಲಿದೆ. ಇನ್ನು ಇತ್ತ ಭಾರತದಲ್ಲಿ ನೆಲೆಸಿರೋ ರಷ್ಯಾದ ಪ್ರಜೆಗಳು ಕೂಡ ರಷ್ಯಾಧ್ಯಕ್ಷರ ಚುನಾವಣೆಯಲ್ಲಿ ವೋಟ್‌ ಮಾಡಿದ್ದಾರೆ. ಕೇರಳದ ತಿರುವನಂತಪುರಂನಲ್ಲಿನ ರಷ್ಯಾ ರಾಯಭಾರಿ ಕಚೇರಿಯ ಮತಗಟ್ಟೆಯಲ್ಲಿ ರಷ್ಯಾ ಪ್ರಜೆಗಳು ತಮ್ಮ ಹಕ್ಕು ಚಲಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply