ದೇಶದಲ್ಲಿ ಮತ್ತೆ 3 ಸಾವಿರ ಜನರಿಗೆ ಕೊರೋನಾ.. 128 ಮಂದಿ ಸಾವು..!

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಮತ್ತೆ 3,277‬ ಜನರಿಗೆ ಹೊಸದಾಗಿ ಕೊರೋನಾ ಸೋಂಕು ಹರಡಿದ್ದು, 128 ಮಂದಿ ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 60 ಸಾವಿರ ಗಡಿ ಹಾಗೂ ಬಲಿಯಾದವರ ಸಂಖ್ಯೆ 2 ಸಾವಿರ ಗಡಿ ದಾಟಿದೆ. ಸದ್ಯ ದೇಶದಲ್ಲಿ 62,939 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ 2,109 ಮಂದಿ ಮೃತಪಟ್ಟಿದ್ದಾರೆ.

ದೇಶದಲ್ಲಿ ಇದುವರೆಗೆ 19,358 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 41,472‬ ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಯಿಲೆಯ ಹಾಟ್​ಸ್ಪಾಟ್​ ಆಗಿರೋ ಮಹಾರಾಷ್ಟ್ರದಲ್ಲಿ ಒಟ್ಟು ಕಾಯಿಲೆ ಪೀಡಿತರ ಸಂಖ್ಯೆ 20 ಸಾವಿರ ಗಡಿ ದಾಟಿದೆ. ಗುಜರಾತ್, ದೆಹಲಿ ಮತ್ತು ತಮಿಳುನಾಡಿನಲ್ಲೂ ಕಾಯಿಲೆಯ ಆರ್ಭಟ ಜೋರಾಗಿದೆ.

ಟಾಪ್​-10 ಕೊರೋನಾ ಪೀಡಿತ ರಾಜ್ಯಗಳು:

1. ಮಹಾರಾಷ್ಟ್ರ: 20,228 (779 ಸಾವು)

2. ಗುಜರಾತ್: 7,796 (472 ಸಾವು)

3. ದೆಹಲಿ: 6,542 (73 ಸಾವು)

4. ತಮಿಳುನಾಡು: 6,535 (44 ಸಾವು)

5. ರಾಜಸ್ಥಾನ: 3,708 (106 ಸಾವು)

6. ಮಧ್ಯಪ್ರದೇಶ: 3,614 (215 ಸಾವು)

7. ಉತ್ತರ ಪ್ರದೇಶ: 3,373 (74 ಸಾವು)

8. ಆಂಧ್ರಪ್ರದೇಶ: 1,930 (44 ಸಾವು)

9. ಪಶ್ಚಿಮ ಬಂಗಾಳ: 1,786 (171 ಸಾವು)

10. ಪಂಜಾಬ್: 1,762 (31 ಸಾವು)

-masthmagaa.com

Contact Us for Advertisement

Leave a Reply