ಆಸ್ಕರ್‌ ಪ್ರಶಸ್ತಿಗೆ ಹತ್ತಿರವಾದ ಭಾರತೀಯ ಮೂವೀ ಹಾಗೂ RRR ಸಾಂಗ್!

masthmagaa.com:

(2023ರ ಆಸ್ಕರ್‌ ಪ್ರಶಸ್ತಿ ತಮ್ಮದಾಗಿಸಿಕೊಳ್ಳೋಕೆ ಭಾರತೀಯ ಮೂವೀ ʻದಿ ಚೆಲ್ಲೋ ಶೊʼ ಮತ್ತು RRR ಮೂವೀ ಸಾಂಗ್‌ ʻನಾಟು ನಾಟುʼ ಒಂದು ಹೆಜ್ಜೆ ಮುಂದೆ ಇಟ್ಟಿವೆ. ಗುಜರಾತ್‌ ಭಾಷೆಯ ದಿ ಚೆಲ್ಲೊ ಶೊ (The Last Show) ಇಂಟರ್‌ನ್ಯಾಷನಲ್‌ ಫೀಚರ್‌ ಫಿಲ್ಮ್‌ ಕೆಟಗರಿಯಲ್ಲಿ ಶಾರ್ಟ್‌ಲಿಸ್ಟ್‌ ಆದ್ರೆ, ಬೆಸ್ಟ್ ಒರಿಜನಲ್‌ ಸಾಂಗ್‌ ಕೆಟಗರಿಯಲ್ಲಿ ನಾಟು ನಾಟು ಸಾಂಗ್‌ ಶಾರ್ಟ್‌ಲಿಸ್ಟ್‌ ಆಗಿದೆ. ಇವುಗಳ ಜೊತೆಗೆ ಡಾಕುಮೆಂಟರಿ ಫಿಲ್ಮ್‌ ಕೆಟಗರಿಯಲ್ಲಿ ಭಾರತದ ಆಲ್‌ ದೆಟ್‌ ಬ್ರೆದ್ಸ್‌ (All That Breathes) ಮತ್ತು ದಿ ಎಲಿಫೆಂಟ್‌ ವಿಸ್ಪರರ್ಸ್‌ (The Elephant Whisperers) ಕೂಡ ಶಾರ್ಟ್‌ಲಿಸ್ಟ್‌ ಆಗಿವೆ. ಆಸ್ಕರ್‌ ಅವಾರ್ಡ್‌ಗಳು ಮುಂದಿನ ವರ್ಷ ಜನವರಿ 24ರಂದು ಅನೌನ್ಸ್‌ ಆಗಲಿವೆ. ಹೀಗಾಗಿ ಈ ವರ್ಷವಾದ್ರೂ ಭಾರತಕ್ಕೆ ಆಸ್ಕರ್‌ ಅವಾರ್ಡ್‌ ಒಲಿದು ಬರಲಿದೆಯಾ ಅಂತ ಎಲ್ರೂ ಕಾಯ್ತಾ ಇದ್ದಾರೆ.

-masthmagaa.com

Contact Us for Advertisement

Leave a Reply