ಏರ್​ಸ್ಟ್ರೈಕ್​ನಲ್ಲಿ ಅಮಾಯಕ ಜನ ಸತ್ತಿದ್ದು ನಿಜ: ಅಮೆರಿಕ

masthmagaa.com:

ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿದ್ದ ಕೊನೆಯ ಏರ್​​ಸ್ಟ್ರೈಕ್​​ನಲ್ಲಿ ಅಮಾಯಕ ಜನ ಸಾವನ್ನಪ್ಪಿರೋದನ್ನು ಕೊನೆಗೂ ಅಮೆರಿಕ ಒಪ್ಪಿಕೊಂಡಿದೆ. ಅಮೆರಿಕ ಅಫ್ಘಾನಿಸ್ತಾನದಿಂದ ಕಂಪ್ಲೀಟಾಗಿ ಹೊರಹೋಗುವ ಮುನ್ನ ಅಂದ್ರೆ ಆಗಸ್ಟ್​ 29ರಂದು ಕಾಬೂಲ್​​ನಲ್ಲಿ ಒಂದು ಏರ್​ಸ್ಟ್ರೈಕ್ ನಡೆಸಿತ್ತು. ಇದ್ರಲ್ಲಿ ಕಾಬೂಲ್ ಏರ್​ಪೋರ್ಟ್​ ಮೇಲೆ ದಾಳಿಗೆ ಅಂತ ಹೊರಟಿದ್ದ ಐಎಸ್​​ ಉಗ್ರ ಸಂಘಟನೆಯ ಉಗ್ರನನ್ನು ಹೊಡೆದುರುಳಿಸಿದ್ದೀವಿ ಅಂತ ಕೂಡ ಅಮೆರಿಕ ಹೇಳಿಕೊಂಡಿತ್ತು. ಆದ್ರೆ ನಂತರದಲ್ಲಿ ದಾಳಿಯಲ್ಲಿ ಜೀವ ಬಿಟ್ಟಿದ್ದು ಉಗ್ರನಲ್ಲ.. ಬದಲಿಗೆ ಒಂದೇ ಕುಟುಂಬದ 10 ಮಂದಿ ಅಮಾಯಕ ಜನ ಅಂತ ವರದಿಯಾಗಿತ್ತು. ಆದ್ರೆ ಈ ಬಗ್ಗೆ ಆರಂಭದಿಂದಲೂ ನಿರಾಕರಿಸಿದ್ದ ಅಮೆರಿಕ ಈಗ ಕೊನೆಗೂ ಒಪ್ಪಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕದ ಸೆಂಟ್ರಲ್ ಕಮಾಂಡ್​​ನ ಕಮಾಂಡರ್ ಜನರಲ್ ಫ್ರಾಂಕ್ ಮ್ಯಾಕೆಂಜೀ, ದಾಳಿಯಲ್ಲಿ ಅಮಾಯಕರು ಸಾವನ್ನಪ್ಪಿದ್ದು ನಿಜ.. ನಮ್ಮಿಂದ ತಪ್ಪಾಗಿದೆ. ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸ್ತೀವಿ ಎಂದಿದ್ದಾರೆ. ಅದೇ ರೀತಿ ಅಮೆರಿಕದ ಸೆಕ್ರೆಟರಿ ಆಫ್ ಡಿಫೆನ್ಸ್​ ಲಾಯ್ಡ್ ಆಸ್ಟಿನ್ ಕೂಡ ಈ ದಾಳಿಗೆ ಕ್ಷಮೆಯಾಚಿಸಿದ್ದಾರೆ.

Contact Us for Advertisement

Leave a Reply