ಲಸಿಕೆ ಚುಚ್ಚುವ ಬಗ್ಗೆ ಮೋದಿ ಮಾತು: ದೇಶದ ಜನತೆಗೆ ಹೇಳಿದ್ದೇನು?

masthmagaa.com:

ಜನವರಿ 16ರಿಂದ ದೇಶದಲ್ಲಿ ಆರಂಭವಾಗಲಿರೋ ಕೊರೋನಾ ಲಸಿಕೆಯ ಅಭಿಯಾನ ಕುರಿತು ಪ್ರಧಾನಿ ಮೋದಿ ಇವತ್ತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ರು. ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಲಸಿಕೆ ಅಭಿಯಾನ ಬಗ್ಗೆ ಹಲವು ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ್ರು. ‘ನಮ್ಮ ದೇಶ ಕೊರೋನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಘಟ್ಟವನ್ನ ತಲುಪುತ್ತಿದೆ. ಅದೇ ವ್ಯಾಕ್ಸಿನೇಷನ್. ನಮ್ಮ ದೇಶದಲ್ಲಿ ಅನುಮೋದನೆ ಪಡೆದಿರುವ ಎರಡೂ ಲಸಿಕೆ ಕೂಡ ಭಾರತದ್ದೇ ಅನ್ನೋದು ಹೆಮ್ಮೆಯ ವಿಚಾರ. ಇನ್ನೂ 4 ಲಸಿಕೆಗಳನ್ನ ಅಭಿವೃದ್ಧಿಪಡಿಸಲಾಗ್ತಿದೆ. ಎರಡನೇ ಹಂತದಲ್ಲಿ ಅಂದ್ರೆ 50 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಹಾಕುವಾಗ ಮತ್ತಷ್ಟು ಲಸಿಕೆಗಳು ನಮ್ಮ ಬಳಿ ಇರಬಹುದು. ಕೊರೋನಾ ಲಸಿಕೆ ವಿಚಾರದಲ್ಲಿ ಸೈಂಟಿಫಿಕ್ ಕಮ್ಯುನಿಟಿ ಅಂದ್ರೆ ವಿಜ್ಞಾನಿಗಳ ಅಭಿಪ್ರಾಯ ಅಗತ್ಯ. ಬೇರೆ ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾಗಿದೆ, ನಮ್ಮ ದೇಶ ಇನ್ನೂ ಮಲಗಿದೆಯಾ ಅಂತ ಕೆಲವರು ಪ್ರಶ್ನೆ ಮಾಡಿದ್ರು. ಆದ್ರೆ ಲಸಿಕೆ ವಿಚಾರದಲ್ಲಿ ವಿಜ್ಞಾನಿಗಳು ಏನ್ ಹೇಳ್ತಾರೋ ಅದೇ ಮುಖ್ಯ. ಇನ್ನೊಂದು ವಿಚಾರ ಅಂದ್ರೆ ಭಾರತದ ಈ ಎರಡೂ ಲಸಿಕೆ ಕಾಸ್ಟ್ ಎಫೆಕ್ಟಿವ್ ಆಗಿದೆ. ಅಂದ್ರೆ ಚೀಪ್ ಆಗಿದೆ. ಒಂದ್ವೇಳೆ ನಾವು ವಿದೇಶಿ ಲಸಿಕೆ ಮೇಲೆ ಡಿಪೆಂಡ್ ಆಗಿದ್ರೆ ನಮ್ಮ ಪರಿಸ್ಥಿತಿ ಹೇಗಿರ್ತಿತ್ತು ಒಂದ್​ಸರಿ ಯೋಚ್ನೆ ಮಾಡಿ. ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್​​ಲೈನ್​ ವರ್ಕರ್ಸ್​ಗೆ (ಸ್ಯಾನಿಟೈಸೇಷನ್ ಸಿಬ್ಬಂದಿ, ಯೋಧರು, ಪೊಲೀಸರು, ಅರೆ ಸೇನಾ ಪಡೆಗಳು) ಲಸಿಕೆ ಹಾಕಲಾಗುತ್ತೆ. ಮೊದಲ ಹಂತದಲ್ಲಿ ಹಾಕುವ ಲಸಿಕೆಯ  ವೆಚ್ಚವನ್ನ ಕೇಂದ್ರ ಸರ್ಕಾರವೇ ಭರಿಸಲಿದೆ. ರಾಜ್ಯ ಸರ್ಕಾರಗಳು ಯಾವುದೇ ಹಣ ಕೊಡಬೇಕಿಲ್ಲ. ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಮತ್ತು ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವ 50 ವರ್ಷದೊಳಗಿನ ಜನರಿಗೆ ಲಸಿಕೆ ಹಾಕಲಾಗುತ್ತೆ. ಲಸಿಕೆಗೆ ಸಂಬಂಧಿಸಿದಂತೆ ಕೋವಿನ್ ಎಂಬ ಡಿಜಿಟಲ್ ಪ್ಲಾಟ್​ಫಾರ್ಮ್​ ಅಭಿವೃದ್ಧಿಪಡಿಸಲಾಗಿದೆ. ಆಧಾರ್ ಕಾರ್ಡ್ ಮೂಲಕ ಫಲಾನುಭವಿಗಳನ್ನ ಗುರುತಿಸಲಾಗುತ್ತೆ. ಅವರಿಗೆ ಎರಡನೇ ಡೋಸ್​ ಕೂಡ ಸರಿಯಾದ ಸಮಯಕ್ಕೆ ಸಿಗುವಂತೆ ಮಾಡಲು ಕೋವಿನ್ ಪ್ಲಾಟ್​ಫಾರ್ಮ್​ ನೆರವಾಗುತ್ತೆ. ಕೋವಿನ್​ನಲ್ಲಿ ಮಾಹಿತಿಯನ್ನ ರಿಯಲ್ ಟೈಂನಲ್ಲಿ ಅಪ್ಡೇಟ್ ಮಾಡಬೇಕು ಅನ್ನೋದು ಎಲ್ಲಾ ರಾಜ್ಯಗಳ ಜೊತೆ ನನ್ನ ಮನವಿ. ಇನ್ನು ಕೊರೋನಾ ಲಸಿಕೆ ಹಾಕಿಸಿಕೊಂಡವರಿಗೆ ಡಿಜಿಟಲ್ ಸರ್ಟಿಫಿಕೆಟ್ ಕೊಡಲಾಗುತ್ತೆ. ಇದರಿಂದ ಯಾರಿಗೆ ಲಸಿಕೆ ಹಾಕಿರುತ್ತೇವೆ ಅನ್ನೋದನ್ನ ಗುರುತಿಸುವ ಜೊತೆಗೆ ಎರಡನೇ ಡೋಸ್ ಯಾವಾಗ ಹಾಕಲಾಗುತ್ತೆ ಅನ್ನೋದನ್ನ ಟ್ರಾಕ್  ಮಾಡಬಹುದು. ಎರಡನೇ ಡೋಸ್ ಹಾಕಿದ ಬಳಿಕ ಫಲಾನುಭವಿಗಳಿಗೆ ಫೈನಲ್ ಸರ್ಟಿಫಿಕೆಟ್ ಕೊಡಲಾಗುತ್ತೆ. ಇಡೀ ಪ್ರಪಂಚದಲ್ಲಿ ಇಲ್ಲಿವರೆಗೆ ಒಂದೂವರೆ ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಭಾರತದಲ್ಲಿ ಮುಂದಿನ ಕೆಲ ತಿಂಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ಹಾಕಬೇಕಿದೆ. ಲಸಿಕೆ ಬಂತು ಅಂತ ನಿರ್ಲಕ್ಷ್ಯ ಬೇಡ. ಈ ಸಂದರ್ಭದಲ್ಲೂ ಕೊರೋನಾ ನಿಯಮಗಳನ್ನ ಪಾಲಿಸಬೇಕು. ಲಸಿಕೆಗೆ ಸಂಬಂಧಿಸಿದ ವದಂತಿಗಳನ್ನ ನಂಬಬೇಡಿ, ಹರಡಬೇಡಿ. ಇದರಿಂದ ಲಸಿಕೆ ಅಭಿಯಾನಕ್ಕೆ ಅಡ್ಡಿಯಾಗಬಹುದು. ಜನವರಿ 16ರಂದು ಕೊರೋನಾ ಲಸಿಕೆಯ ಅಭಿಯಾನ ಆರಂಭವಾಗಲಿದೆ. ಜನವರಿ 17ರಂದು ಪೊಲಿಯೋ ಲಸಿಕೆಯ ಅಭಿಯಾನ ಇದೆ. ಅದಕ್ಕೂ ಸಮಸ್ಯೆಯಾಗಬಾರದು. ಮತ್ತೊಂದು ವಿಚಾರ ಅಂದ್ರೆ 9 ರಾಜ್ಯಗಳಲ್ಲಿ ಹಕ್ಕಿಜ್ವರ ದೃಢಪಟ್ಟಿದೆ. ಹಕ್ಕಿಜ್ವರ ತಡೆಯಲು ಕ್ರಮ ಕೈಗೊಳ್ಳುತ್ತಿದ್ದೇವೆ. ಇದರಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ತುಂಬಾ ಮುಖ್ಯ. ಹಕ್ಕಿಜ್ವರ ಹರಡದ ರಾಜ್ಯಗಳು ಕೂಡ ಎಚ್ಚರದಿಂದ ಇರಬೇಕು. ಹಕ್ಕಿಜ್ವರ ಕುರಿತ ವದಂತಿಗಳನ್ನ ಕೂಡ ಹಬ್ಬಿಸಬೇಡಿ’ ಅಂತ ಪ್ರಧಾನಿ ಮೋದಿ ಹೇಳಿದ್ರು. ಇನ್ನು ಸಿಎಂಗಳ ಜೊತೆ ಸಭೆ ವೇಳೆ, ‘ರಾಜಕಾರಣಿಗಳು ತಮ್ಮ ಸರದಿ ಬಂದಾಗಲೇ ಲಸಿಕೆ ಹಾಕಿಕೊಳ್ಳಬೇಕು, ಲೈನ್ ಜಂಪ್ ಮಾಡಬಾರದು ಅನ್ನೋದನ್ನ ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ’ ಅಂತ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply