ವಿರೋಧ ಪಕ್ಷಗಳ ಟೀಕೆಗಳನ್ನ ಔಟ್‌ ಆಫ್‌ ಸಿಲಬಸ್‌ ಎಂದ ಪ್ರಧಾನಿ ಮೋದಿ!

masthmagaa.com:

ದೆಹಲಿಯಲ್ಲಿ ನಡೆದ ಆರನೇ ಅವೃತ್ತಿಯ ʻಪರೀಕ್ಷಾ ಪೆ ಚರ್ಚಾʼ ಕಾರ್ಯಕ್ರಮದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದಾರೆ. ಇದೇ ವೇಳೆ ವಿರೋಧ ಪಕ್ಷಗಳ ಟೀಕೆ ಬಗ್ಗೆ ವಿದ್ಯಾರ್ಥಿಗಳು ಕೇಳಿದೆ ಪ್ರಶ್ನೆಗೆ ಮೋದಿ, ಈ ಪ್ರಶ್ನೆ ಔಟ್‌ ಆಫ್‌ ಸಿಲಬಸ್‌ ಅಂತ ತಮಾಷೆ ಮಾಡಿದ್ದಾರೆ. ಜೊತೆಗೆ ಟೀಕೆಗಳು ಸಮೃದ್ಧ ಪ್ರಜಾಪ್ರಭುತ್ವಕ್ಕೆ ಶುದ್ಧಿ ಯಜ್ಞ ಅಂತ ನಾನು ನಂಬಿದ್ದೇನೆ ಅಂತ ಮೋದಿ ಹೇಳಿದಾರೆ. ಅಲ್ದೇ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗದೆ ಗುರಿಯ ಕಡೆ ಗಮನ ಹರಿಸ್ಬೇಕು. ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು..ಮನೆಯಲ್ಲಿ ತಾಯಿ ಹೇಗೆ ಟೈಮ್‌ ಮ್ಯಾನೇಜ್‌ಮೆಂಟ್‌ ಮಾಡುತ್ತಾರೆ ನೋಡಿ ಅದ್ರಿಂದ ಕಲಿತುಕೊಳ್ಳಿ ಅಂತ ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಅಷ್ಟೆ ಅಲ್ದೆ ಕೆಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಮೋಸ ಮಾಡೋಕೆ ತಮ್ಮ ಟ್ಯಾಲೆಂಟ್‌ ಬಳಸೋ ಬದಲು, ಅದನ್ನೆ ಒಳ್ಳೆ ರೀತಿಯಲ್ಲಿ ಉಪಯೋಗಿಸಿದರೆ ಯಶಸ್ವಿಯಾಗುತ್ತಾರೆ. ಜೀವನದಲ್ಲಿ ನಾವು ಶಾರ್ಟ್‌ಕಟ್‌ಗಳನ್ನ ಯಾವತ್ತೂ ಆಯ್ಕೆ ಮಾಡಿಕೊಳ್ಬಾರದು ಅಂತ ಮೋದಿ ಕಿವಿಮಾತು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply