1600 ಕೋಟಿ ಅಕ್ರಮ ಹಣ ವರ್ಗಾವಣೆಯಲ್ಲಿ ಪಾಕ್‌ ಪ್ರಧಾನಿ ಮಗ ಖುಲಾಸೆ!

masthmagaa.com:

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಾಕ್‌ ಪ್ರಧಾನಿ ಶೆಹಬಾಜ್‌ ಶರೀಫ್‌ರ ಪುತ್ರ ಖುಲಾಸೆಗೊಂಡಿದ್ದಾರೆ. ಸುಲೇಮಾನ್‌ ಶೆಹಬಾಜ್‌ ಹಾಗೂ ಇತರರನ್ನ 1600 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಾಕ್‌ನ ವಿಶೇಷ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿದೆ. ಅಂದ್ಹಾಗೆ ಪಾಕ್‌ನ Federal Investigation Authority, 2008 ಹಾಗೂ 2018ರ ನಡುವೆ ಸುಮಾರು 1600 ಕೋಟಿ ರೂಪಾಯಿ ಹಣವನ್ನ 28 ಬ್ಯಾಂಕ್‌ ಅಕೌಂಟ್‌ಗಳ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಅಂತ ಆರೋಪಿಸಿತ್ತು. ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶರೀಫ್‌ ಶೆಹಬಾಜ್‌ ಹಾಗೂ ಅವರ ಇಬ್ಬರು ಪುತ್ರರಾದ ಸುಲೇಮಾನ್‌ ಹಾಗೂ ಹಮ್ಜಾ ಅವರ ವಿರುದ್ಧ ಭ್ರಷ್ಟಾಚಾರ ಹಾಗೂ ಮನಿ ಲಾಂಡರಿಂಗ್‌ ಪ್ರಕರಣವನ್ನ 2020ರಲ್ಲಿ ದಾಖಲಿಸಿತ್ತು. 2022ರ ಅಕ್ಟೋಬರ್‌ನಲ್ಲಿ ಶೆಹಬಾಜ್‌ ಹಾಗೂ ಹಮ್ಜಾ ಕೇಸ್‌ನಿಂದ ಖುಲಾಸೆಗೊಂಡಿದ್ರು. ಇದೀಗ ಸುಲೇಮಾನ್‌ ಕೂಡ ಕೇಸ್‌ನಿಂದ ಖುಲಾಸೆಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply