ಪಾಕ್​ನಲ್ಲಿ ಹೊಸ ಎರಡು ಮಸೂದೆಗಳಿಗೆ ಅಧ್ಯಕ್ಷರ ಸಹಿ!

masthmagaa.com:

ಪಾಕಿಸ್ತಾನದಲ್ಲಿ ಇತ್ತೀಚೆಗೆ ಅಫ್ಘಾನಿಸ್ತಾನ ರಾಯಭಾರಿಯ ಮಗಳನ್ನು ಅಪಹರಿಸಲಾಗಿತ್ತು. ಇದಾದ ಬಳಿಕ ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಅಧಿಕಾರಿಯನ್ನು ಹತ್ಯೆ ಮಾಡಲಾಗಿತ್ತು. ಅದ್ರ ಬೆನ್ನಲ್ಲೇ ಈಗ ಮಹಿಳೆಯರ ರಕ್ಷಣೆ ಸಂಬಂಧಿತ ಕಾನೂನಿಗೆ ಪಾಕ್ ಅಧ್ಯಕ್ಷ ಆರಿಫ್ ಅಲ್ವಿ ಸಹಿ ಹಾಕಿದ್ದಾರೆ. ಇದೊಂದೇ ಅಲ್ಲ.. ಒಟ್ಟು 2 ಮಹತ್ವದ ಮಸೂದೆಗಳಿಗೆ ಆರಿಫ್ ಅಲ್ವಿ ಸಹಿ ಹಾಕಿದ್ದಾರೆ. ಅದ್ರಲ್ಲಿ ಒಂದು ಮಹಿಳೆಯರಿಗೆ ಸಂಬಂಧಿಸಿದ್ದಾಗಿದೆ. ಈ ಕಾನೂನು ಮಹಿಳೆಯರ ಆಸ್ತಿ ಹಕ್ಕನ್ನು ಕಾಪಾಡುತ್ತೆ ಮತ್ತು ಕಿರುಕುಳ, ಬಲವಂತ, ಮೋಸದಿಂದ ರಕ್ಷಣೆ ನೀಡಲಿದೆ. ಅದೇ ರೀತಿ ಮತ್ತೊಂದು ಮಸೂದೆ ಅಂದ್ರೆ ಅದು ಸೀನಿಯರ್ ಸಿಟಿಜನ್ ಬಿಲ್ 2021.. ಇದ್ರ ಮೂಲಕ ಪಾಕಿಸ್ತಾನದಲ್ಲಿರೋ ಹಿರಿಯ ನಾಗರಿಕರ ಅಭಿವೃದ್ಧಿಯ, ಕಲ್ಯಾಣದ ಗುರಿ ಹೊಂದಲಾಗಿದೆ.

-masthmagaa.com

Contact Us for Advertisement

Leave a Reply