ಪಾಕ್‌ನ ಸಾಲದ ಗಾಯಕ್ಕೆ ಇರಾನ್‌ ಪೈಪ್‌ಲೈನ್‌ನ ದಂಡದ ಬರೆ!

masthmagaa.com:

ಈಗಾಗಲೇ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹಣಕ್ಕಾಗಿ ಭಿಕ್ಷೆ ಬೇಡ್ತಿರೊ ಪಾಕ್‌ಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಇರಾನ್‌ ಜೊತೆಗಿನ ಗ್ಯಾಸ್‌ ಪೈಪ್‌ಲೈನ್‌ ಯೋಜನೆಯನ್ನ ಟೈಂಗೆ ಸರಿಯಾಗಿ ಕಂಪ್ಲೀಟ್‌ ಮಾಡಿಲ್ಲ ಅಂದ್ರೆ ಬರೊಬ್ಬರಿ 18 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 1.47 ಲಕ್ಷ ಕೋಟಿ ರೂ. ದಂಡವನ್ನ ಕಟ್ಟಬೇಕಾಗುತ್ತೆ ಅಂತ ಹೇಳಲಾಗ್ತಿದೆ. ಇನ್ನು ಈ ಬಗ್ಗೆ ಪಾಕ್‌ನ ಸಂಸದೀಯ ಪಬ್ಲಿಕ್‌ ಅಕೌಂಟ್ಸ್‌ ಕಮಿಟಿ ಸಭೆ ನಡೆಸಿದೆ. ಈ ವೇಳೆ ಇರಾನ್‌ನಿಂದ ಅನಿಲವನ್ನ ಆಮದು ಮಾಡಿಕೊಳ್ಳೋಕೆ ಗ್ಯಾಸ್‌ ಪೈಪ್‌ಲೈನ್‌ನ್ನ ನಿರ್ಮಿಸಲು 33,200 ಕೋಟಿ ರೂ. ಕಲೆಕ್ಟ್‌ ಮಾಡಲಾಗಿದೆ. ಆದ್ರೆ ಹಣ ಯುಸ್‌ ಆಗದೇ ಹಾಗೆ ಇದೆ. ಪ್ರಾಜೆಕ್ಟ್‌ ಕೂಡ ಸ್ಥಗಿತಗೊಂಡಿದೆ. ಪ್ರಾಜೆಕ್ಟ್‌ನ್ನ ಟೈಂ ಲಿಮಿಟ್‌ ಒಳಗೆ ಪೂರ್ಣಗೊಳಿಸದಿದ್ರೆ ದಂಡವನ್ನ ಎದುರಿಸಬೇಕಾಗುತ್ತೆ ಅಂತ ಸಮಿತಿಯ ಸದಸ್ಯರಾಗಿರೊ ಸೈಯದ್‌ ಹುಸ್ಸೇನ್‌ ತಾರಿಕ್‌ ಎಚ್ಚರಿಸಿದ್ದಾರೆ. ಇದಕ್ಕೆ ಉತ್ತರಿಸಿದ ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿ, ಇರಾನ್‌ನಿಂದ ಅನಿಲವನ್ನ ಆಮದು ಮಾಡಿಕೊಳ್ಳದಂತೆ ಅಮೆರಿಕ ಬ್ಯಾನ್‌ ಹೇರಿದೆ. ಹೀಗಾಗಿ ನಾವು ಇರಾನ್‌ನಿಂದ ಅನಿಲ ಆಮದು ಮಾಡಿಕೊಳ್ಳೋಕೆ ಆಗಲ್ಲ. ಅಲ್ದೇ ಈ ಬಗ್ಗೆ ಅಮೆರಿಕದ ರಾಯಭಾರಿ ಜೊತೆ ಮಾತಾಡಿದ್ದು, ಪ್ರಾಜೆಕ್ಟ್‌ನ್ನ ಮುಂದುವರೆಸೋಕೆ ಅನುಮತಿ ಕೊಡಿ ಅಥ್ವಾ ದಂಡದ ಹಣವನ್ನ ಕೊಡಿ ಅಂತ ಕೇಳಿರೋದಾಗಿ ಹೇಳಿದ್ದಾರೆ. ಅಂದ್ಹಾಗೆ ಇರಾನ್‌ ಜೊತೆಗಿನ ನ್ಯೂಕ್ಲಿಯರ್‌ ಪ್ರೋಗ್ರಾಮ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇರಾನ್‌ ಮೇಲೆ ಅಮೆರಿಕ ಬ್ಯಾನ್‌ ಹೇರಿದೆ. ಇನ್ನೊಂದ್‌ ಕಡೆ ಪಾಕ್‌ ಸರ್ಕಾರ IMFನ ಮತ್ತೊಂದು ಡಿಮ್ಯಾಂಡ್‌ಗೆ ತಲೆಬಾಗಿದ್ದು, ಎಲೆಕ್ಟ್ರಿಸಿಟಿ ಮೇಲೆ ಹೆಚ್ಚುವರಿ ತೆರಿಗೆಯನ್ನ ವಿಧಿಸಿದೆ. ಪ್ರತಿ ಯುನಿಟ್‌ಗೆ 3.23 ರೂ. ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಹೊಸ ದರ ಮುಂದಿನ ಜುಲೈ 1ರಿಂದ ದೇಶಾದ್ಯಂತ ಜಾರಿಗೊಳ್ಳಲಿದೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply