ಎರಡೇ ದಿನಗಳಲ್ಲಿ 10 ಉಗ್ರರ ಮಟ್ಟ ಹಾಕಿದ ಪಾಕಿಸ್ತಾನ!

masthmagaa.com:

ಉಗ್ರರ ಅಡಗುದಾಣವಾದ ಪಾಕ್‌ ನೆಲೆಯಲ್ಲೇ ನಡೆದ ಎರಡು ದಿನಗಳ ಕಾರ್ಯಚರಣೆಯಲ್ಲಿ 10 ಉಗ್ರರು ಮೃತಪಟ್ಟಿರೋದು ವರದಿಯಾಗಿದೆ. ಪಾಕಿಸ್ತಾನದ ಭದ್ರತಾ ಪಡೆಗಳು ಪ್ರತ್ಯೇಕ ಕಾರ್ಯಚರಣೆಗಳನ್ನ ನಡೆಸಿ ಅಲ್ಲಿನ ಖೈಬರ್‌ ಪಖ್ತುಂಖ್ವ ಪ್ರಾಂತ್ಯದ ವಜಿರಿಸ್ತಾನ್‌ ಜಿಲ್ಲೆಯಲ್ಲಿ 10 ಉಗ್ರನ್ನ ಮಟ್ಟ ಹಾಕಿದೆ. ಈ ಯಶಸ್ವಿ ಕಾರ್ಯಚರಣೆಯನ್ನ ಎರಡು ದಿನಗಳಲ್ಲಿ ನಡೆಸಲಾಗಿದೆ. ಹೀಗಂತ ಅಲ್ಲಿನ ಇಂಟರ್‌-ಸರ್ವಿಸಸ್‌ ಪಬ್ಲಿಕ್‌ ರಿಲೇಷನ್ಸ್‌ (ISPR) `Dawn’ ಮಾಹಿತಿ ನೀಡಿದೆ. ಇದ್ರ ಪ್ರಕಾರ, ಮಾರ್ಚ್‌ 08 ರಂದು ನಡೆಸಲಾದ ಮೊದಲ ಕಾರ್ಯಚರಣೆಯಲ್ಲಿ 4 ಉಗ್ರರು ಮೃತಪಟ್ಟಿದ್ದಾರೆ. ನಂತ್ರ ಕಂಟಿನ್ಯೂ ಆದ ಈ ಕಾರ್ಯಚರಣೆಯಲ್ಲಿ ಇನ್ನೂ 04 ಮಂದಿ ಉಗ್ರರನ್ನ ಹತ್ಯೆ ಮಾಡಲಾಗಿದೆ. ಆಮೇಲೆ ಮತ್ತೊಂದು ಪ್ರತ್ಯೇಕ ಕಾರ್ಯಚರಣೆಯಲ್ಲಿ ಪಾಕ್‌-ಅಫ್ಘಾನ್‌ ಗಡಿ ನುಸುಳ್ತಿದ್ದ 5 ಉಗ್ರರನ್ನ ಗುರುತಿಸಲಾಗಿದ್ದು, ಇವ್ರ ಪೈಕಿ ಇಬ್ಬರು ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರು ಉಗ್ರರಿಗೆ ಗಾಯಗಳಾಗಿವೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply