ಮುಸ್ಲಿಂ ಧರ್ಮಕ್ಕೆ ಧಕ್ಕೆ! ಪಾಕ್‌ ವಿದ್ಯಾರ್ಥಿಗೆ ಮರಣದಂಡನೆ!

masthmagaa.com:

ಮುಸ್ಲಿಂರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಕಾರಣದಿಂದ ಇದೀಗ ಪಾಕಿಸ್ತಾನದಲ್ಲಿ 22 ವರ್ಷದ ವಿದ್ಯಾರ್ಥಿಗೆ ಮರಣದಂಡನೆ ವಿಧಿಸಲಾಗಿದೆ. ಜೊತೆಗೆ 17 ವರ್ಷದ ವಿದ್ಯಾರ್ಥಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಇವ್ರಿಬ್ರು ಪ್ರವಾದಿ ಮುಹಮ್ಮದ್‌ ಹಾಗೂ ಅವ್ರ ಪತ್ನಿಯರ ಬಗ್ಗೆ ವಾಟ್ಸ್ಯಾಪ್‌ನಲ್ಲಿ ಕೆಲ ಫೋಟೋ ಮತ್ತು ವಿಡಿಯೋಗಳನ್ನ ಶೇರ್‌ ಮಾಡಿದ್ರು. ಇದ್ರಲ್ಲಿ ಅವ್ರ ಬಗ್ಗೆ ಅವಹೇಳನಕಾರಿ ಪದಗಳನ್ನ ಬಳಕೆ ಮಾಡಿದ್ರು ಅಂತ ಪಾಕ್‌ನ ಪಂಜಾಬ್‌ ಪ್ರಾಂತ್ಯದ ಕೋರ್ಟ್‌ ಈ ಇಬ್ಬರು ವಿದ್ಯಾರ್ಥಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಮುಸ್ಲಿಂರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡೋ ಕೆಲಸ ಮಾಡಿದ್ದಾರೆ ಅಂತ ತೀರ್ಪು ನೀಡುವಾಗ ಕೋರ್ಟ್‌ ಹೇಳಿಕೆ ಕೊಟ್ಟಿದೆ. ಅಂದ್ಹಾಗೆ ಪಾಕ್‌ನ ಕಾನೂನಿನ ಪ್ರಕಾರ ಈ ರೀತಿ ಧರ್ಮದ ವಿಚಾರವಾಗಿ ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿದ್ರೆ ಅಥವಾ ಧಾರ್ಮಿಕ ಭಾವನೆಗೆ ಧಕ್ಕೆ ತಂದ್ರೆ ಮರಣದಂಡನೆ ನೀಡಲಾಗುತ್ತೆ. ಆದ್ರೆ ಈ ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬಾತ ಮೈನರ್‌ ಆದ ಕಾರಣ…ಆತನಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply