ಪಾಕ್‌ನಿಂದ ಜಾಗ ಖಾಲಿ ಮಾಡಿದ ಭಾರಿ ಸಂಖ್ಯೆಯ ಅಫ್ಘಾನ್‌ ಅಕ್ರಮ ವಲಸಿಗರು!

masthmagaa.com:

ಪಾಕಿಸ್ತಾನದಲ್ಲಿದ್ದ ಅಫ್ಘಾನಿಸ್ತಾನದ ಅಕ್ರಮ ವಲಸಿಗರು ತಮ್ಮ ತಾಯ್ನಾಡಿಗೆ ತೆರಳೋದನ್ನ ಮುಂದುವರೆಸಿದ್ದಾರೆ. ಪಾಕಿಸ್ತಾನ ಸರ್ಕಾರದ ಆದೇಶದ ಮೇರೆಗೆ ಅಫ್ಘಾನ್‌ ಅಕ್ರಮ ವಲಸಿಗರು ಪಾಕ್‌ ತೊರೆಯುತ್ತಿದ್ದು, ಡಿಸೆಂಬರ್‌ 2ರವರೆಗೆ ಒಟ್ಟು 2,53,068 ಜನ ಅಫ್ಘಾನ್‌ಗೆ ರಿಟರ್ನ್‌ ಆಗಿದ್ದಾರೆ ಅಂತ ವರದಿಯಾಗಿದೆ. ಪಾಕಿಸ್ತಾನ-ಅಫ್ಘಾನಿಸ್ತಾನದ ಮೂರು ಗಡಿಗಳ ಮೂಲಕ ವಾಪಾಸ್‌ ಆಗ್ತಿದ್ದಾರೆ. ಅಲ್ದೆ ಪ್ರತಿದಿನ 10 ಸಾವಿರ ಅಕ್ರಮ ವಲಸಿಗರನ್ನ ವಾಪಸ್‌ ಕಳಿಸ್ಬೇಕು ಅಂತ ಪಾಕ್‌ ಸರ್ಕಾರ ಡಿಸೈಡ್‌ ಮಾಡಿದೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇತ್ತ ಇದೇ ಡಿಸೆಂಬರ್‌ ತಿಂಗಳಲ್ಲಿ ಅಮೆರಿಕದ ಇಬ್ಬರು ಉನ್ನತ ಅಧಿಕಾರಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಅಂತ ತಿಳಿದು ಬಂದಿದೆ. ಈ ವೇಳೆ ಅಫ್ಘಾನ್‌ ಅಕ್ರಮ ವಲಸಿಗರ ಸಮಸ್ಯೆ ಸೇರಿದಂತೆ ಹಲವು ವಿಚಾರಗಳು ಕುರಿತು ಚರ್ಚೆ ನಡೆಸಲಿದ್ದಾರೆ ಅಂತ ಪಾಕ್‌ ವಿದೇಶಾಂಗ ಸಚಿವಾಲಯದ ವಕ್ತಾರೆ ಮುಮ್ತಾಜ್‌ ಜಹ್ರಾ ಬಲೋಚ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply