ಹಮಾಸ್​​ ಪಡೆಗೆ ಪಾಕಿಸ್ತಾನದಿಂದಲೇ ತರಬೇತಿ!

masthmagaa.com:

ಇತ್ತೀಚೆಗಷ್ಟೇ ಇಸ್ರೇಲ್​​-ಗಾಜಾ ನಡುವಿನ ಸಂಘರ್ಷ ಮತ್ತೊಂದು ದೊಡ್ಡ ಯುದ್ಧದ ಭೀತಿ ಹುಟ್ಟಿಸಿತ್ತು. ಭೀತಿ ಹುಟ್ಸೋದೇನು.. ಒಂದು ಹಂತಕ್ಕೆ ಯುದ್ಧನೇ ಆಗೋಗಿತ್ತು. ಆದ್ರೀಗ ಗಾಜಾ ಕಡೆಯಿಂದ ರಾಕೆಟ್ ಹಾರಿಸುತ್ತಿದ್ದ ಹಮಾಸ್ ಪಡೆಗೆ ಪಾಕಿಸ್ತಾನ ಸೇನೆಯೇ ಟ್ರೇನಿಂಗ್ ಕೊಡ್ತಿದೆ ಅನ್ನೋ ವಿಚಾರ ಬಹಿರಂಗವಾಗಿದೆ. ಈ ವಿಚಾರವನ್ನು ಬೇರೆ ಯಾರೋ ಬಹಿರಂಗಪಡಿಸಿದ್ದಲ್ಲ. ಬದಲಾಗಿ ಪಾಕಿಸ್ತಾನದ ಪ್ರಮುಖ ನಾಯಕ, ರಾಜಕಾರಣಿ ರಾಜಾ ಜಾಫರ್ ಅಲ್ ಹಕ್ ಈ ವಿಚಾರವನ್ನು ಪ್ರಪಂಚದ ಮುಂದೆ ಇಟ್ಟಿದ್ದಾರೆ. ಪಾಕಿಸ್ತಾನ ತುಂಬಾ ಹಿಂದಿನಿಂದಲೂ ಹಮಾಸ್ ಪಡೆಗೆ ಟ್ರೇನಿಂಗ್ ಕೊಡ್ತಿದೆ. ಈಗಲೂ ಕೊಡ್ತಿದೆ. ಅಷ್ಟೇ ಅಲ್ಲ.. ಪಾಕಿಸ್ತಾನ ಸೇನೆಯ ಸ್ಪೆಷಲ್ ಕಮ್ಯಾಂಡೋ ಯುನಿಟ್​​ ಎಸ್​​ಎಸ್​​ಜಿಯ ಒಂದು ಬೆಟಾಲಿಯನ್ ಹಲವು ವರ್ಷಗಳಿಂದ ಗಾಜಾ ಪಟ್ಟಿಯಲ್ಲೇ ಬೀಡು ಬಿಟ್ಟು, ಈ ಟ್ರೇನಿಂಗ್ ಸೆಂಟರ್ ನಡೆಸ್ತಾ ಇದೆ ಅಂತ ಹೇಳಿದ್ದಾರೆ. ನಾನು ಈ ಹಿಂದೆ ಟ್ಯುನೇಷಿಯಾಗೆ ಹೋದಾಗ ಪ್ಯಾಲೆಸ್ತೇನ್ ಮಿಲಿಟರಿ ನಾಯಕ ಅಬು ಜಿಹಾದ್ ಅಂದ್ರೆ ಖಲೀದ್ ಅಲ್ ವಜೀರ್ ಅವ್ರನ್ನ ಭೇಟಿಯಾಗಿದ್ದೆ. ಆಗ ಅವರು ಬದುಕಿದ್ರು..(1988ರಲ್ಲಿ ಅಬು ಜಿಹಾದ್​ ಸಾವನ್ನಪ್ಪಿದ್ರು) ಈ ವೇಳೆ ಅವರು ನನ್ ಜೊತೆ ಮಾತನಾಡಿದ್ರು. ಇಸ್ರೇಲ್ ಜೊತೆಗೆ ಯಾವಾಗ ಜಗಳ ಆದ್ರೂ, ಯುದ್ಧ ಆದ್ರೂ ಹೆಚ್ಚು ಹೋರಾಡೋರು, ಮುಂಚೂಣಿಯಲ್ಲಿ ನಿಲ್ಲೋರು ಪಾಕ್ ಸೇನೆಯಿಂದ ಟ್ರೈನಿಂಗ್ ಪಡೆದವರೇ ಆಗಿರ್ತಾರೆ. ಕೆಲವರು ಪಾಕ್​ನಲ್ಲಿದ್ದು ಟ್ರೇನಿಂಗ್ ಪಡ್ಕೊಂಡು ಬಂದಿದ್ರೆ, ಇನ್ನು ಕೆಲವರಿಗೆ ಪಾಕ್ ಟ್ರೂಪ್ ಇಲ್ಲೇ ಟ್ರೇನಿಂಗ್ ಕೊಟ್ಟಿದೆ. ಈಗಲೂ ಕೊಡ್ತಿದೆ ಅಂತ ಹೇಳಿದ್ರು ಅಂತ ಹೇಳಿದ್ದಾರೆ ರಾಜಾ ಜಾಫರ್ ಅಲ್ ಹಕ್. ಈ ರಾಜಾ ಜಾಫರ್ ಯಾರು ಅಂತ ನೋಡೋದಾದ್ರೆ ಇವರು ಪಾಕಿಸ್ತಾನದ ಸಂಸದ.. 2018ರಿಂದ 2021ರ ಮಾರ್ಚ್​​ವರೆಗೂ ವಿಪಕ್ಷ ನಾಯಕರಾಗಿದ್ರು. ಈ ಹಿಂದೆ ಪಾಕ್ ಸರ್ಕಾರದಲ್ಲಿ ಮಂತ್ರಿಯಾಗಿಯೂ ಕೆಲಸ ಮಾಡಿದ ಅನುಭವಿ ರಾಜಕಾರಣಿಯಾಗಿದ್ದಾರೆ. ಅಂದಹಾಗೆ ಇಸ್ರೇಲ್ ದೇಶಕ್ಕೆ ಮೊದಲಿಂದಲೂ ಪಾಕಿಸ್ತಾನ ದೇಶದ ಮಾನ್ಯತೆ ನೀಡಿಲ್ಲ. ಅದಕ್ಕೆ ಕಾರಣ ಧರ್ಮ.. ಪಾಕಿಸ್ತಾನದ ಯಾವುದೇ ಪ್ರಜೆ ಪಾಸ್​​​ಪೋರ್ಟ್​​ ಬಳಸಿ ಇಸ್ರೇಲ್ ಹೋಗೋಕಾಗಲ್ಲ. ಅದ್ರಲ್ಲಿ ಈ ಪಾಸ್​ಪೋರ್ಟ್​ ಇಸ್ರೇಲ್ ಬಿಟ್ಟು, ಇಡೀ ವಿಶ್ವದ ಎಲ್ಲಾ ದೇಶಗಳಿಗೆ ಅನ್ವಯವಾಗುತ್ತೆ ಅಂತ ಉಲ್ಲೇಖಿಸಲಾಗಿದೆ.

-masthmagaa.com

Contact Us for Advertisement

Leave a Reply