ಪಾಕಿಸ್ತಾನದ ಶಾಲೆಗಳಲ್ಲಿ ಟೀಚರ್​​ಗಳಿಗೆ ಹೊಸ ರೂಲ್ಸ್!

masthmagaa.com:

ಪಾಕಿಸ್ತಾನದಲ್ಲಿ ಶಿಕ್ಷಕರು ಶಾಲೆ ಕಾಲೇಜುಗಳಲ್ಲಿ ಯಾವುದೇ ಕಾರಣಕ್ಕು ಜೀನ್ಸ್‌, ಟೀಶರ್ಟ್‌, ಹಾಗೂ ಮಹಿಳೆಯರು ಬಿಗಿಯಾದ ಉಡುಪು ಧರಿಸುವಂತಿಲ್ಲ. ಅಂತ ಪಾಕಿಸ್ತಾನದ ಫೆಡರಲ್‌ ಶಿಕ್ಷಣ ನಿರ್ದೇಶನಾಯಲಯ ಹೇಳಿದೆ. ಇವ್ರು ಪಾಕಿಸ್ತಾನದ, ಮಹಿಳಾ ಹಾಗೂ ಪುರುಷ ಶಿಕ್ಷಕಿಯರ ಉಡುಪುಗಳ ಬಗ್ಗೆ ಕೆಲವು ನಿಯಮಗಳನ್ನ ತಂದಿದ್ದು, ಅದ್ರಂತೆ ಮಹಿಳಾ ಶಿಕ್ಷಕರು ಹಾಗೂ ಪುರುಷ ಶಿಕ್ಷಕರು ಬಿಗಿಯಾದ ಉಡುಪು, ಜೀನ್ಸ್‌, ಟೀ ಶರ್ಟ್‌ ಹಾಕುವಂತಿಲ್ಲ. ಲೂಸ್‌ ಲೂಸ್‌ ಆಗಿರುವ ಕುರ್ತಗಳನ್ನ ಪ್ಯಾಂಟ್‌ಗಳನ್ನ ಹಾಕ್ಬೇಕು. ಸರಿಯಾದ ರೀತಿಯಲ್ಲಿ ಕ್ಷೌರ ಮಾಡಿಸೋದು, ಗಡ್ಡ, ಉಗುರು ಕತ್ತರಿಸೋದು, ಉತ್ತಮವಾದ ಸುಗಂಧ ದ್ರವ್ಯವನ್ನ ಬಳಸ್ಬೇಕು. ಅಫೀಶಿಯಲ್‌ ಮೀಟಿಂಗ್‌ ಗ್ಯಾದರಿಂಗ್‌ಗಳಲ್ಲಿ ಕೂಡ ಮಹಿಳೆಯರು ಫ್ಯಾನ್ಸಿ, ಪಾರ್ಟಿ ವೇರ್‌ಗಳನ್ನ ಹಾಕಂಗಿಲ್ಲ ಅಂತ ಆದೇಶಿಸಲಾಗಿದೆ. ಚಳಿಗಾಲದಲ್ಲಿ ಮಹಿಳಾ ಶಿಕ್ಷಕಿಯರು ಬೇಕಾದ್ರೆ ಕೋಟ್‌ ಸ್ವೆಟರ್​​​ಗಳನ್ನ ಧರಿಸ್ಬೋದು. ಆದ್ರೆ ಅದು ಡೀಸೆಂಟ್‌ ಕಲರ್‌ ಹಾಗೂ ಡಿಸೈನ್‌ ಹೊಂದಿರಬೇಕು. ಹಾಗೆ ಮಹಿಳಾ ಶಿಕ್ಷಕಿಯರು ಸ್ಲಿಪರ್‌ ಧರಿಸುವಂತಿಲ್ಲ. ಪುರುಷ ಶಿಕ್ಷಕರು ಸಲ್ವಾರ್‌ ಕಮೀಜ್‌ ಧರಿಸೋದು, ವೆಸ್ಟ್‌ಕೋಟ್‌ ಧರಿಸೋದು, ಟೈ ಹೊಂದಿರುವ ಶರ್ಟ್‌ ಧರಿಸೋದು ಕಡ್ಡಾಯ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply