ಧರ್ಮದ ಹೆಸರೇಳಿ ವಿಕಿಪಿಡಿಯಾವನ್ನೇ ಬ್ಲಾಕ್‌ ಮಾಡಿದ ಪಾಕಿಸ್ತಾನ!

masthmagaa.com:

ಧರ್ಮನಿಂದನೆ ಕಂಟೆಂಟ್‌ಗಳ ಆರೋಪದ ಮೇಲೆ ಪಾಕಿಸ್ತಾನ ವಿಕಿಪಿಡಿಯಾವನ್ನೂ ಬ್ಲಾಕ್‌ ಮಾಡಿದೆ. ಧರ್ಮನಿಂದನೆಯ ವಿಷಯಗಳನ್ನ ತೆಗೆದು ಹಾಕಿ ಅಂತ ಹೇಳಿ Pakistan Telecommunication Authority(PTA) ವಿಕಿಪಿಡಿಯಾಗೆ 48 ಗಂಟೆಗಳ ಸಮಯವನ್ನ ನೀಡಿತ್ತು. ಆದ್ರೆ ಈ ಬಗ್ಗೆ ವಿಕಿಪಿಡಿಯಾ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಪಾಕ್‌ ಸರ್ಕಾರ ವಿಕಿಪಿಡಿಯವನ್ನ ಬ್ಲಾಕ್‌ ಮಾಡಿದೆ.ಧರ್ಮ ನಿಂದನೆ ಕಂಟೆಂಟ್‌ ಅಂತ ಪಾಕಿಸ್ತಾನ ಹೇಳ್ತಿರೋ ವಿಷಯಗಳನ್ನ ವಿಕಿಪಿಡಿಯಾ ರಿಮೂವ್‌ ಮಾಡಿದ್ರೆ ಪುನಃ ವಿಕಿಪಿಡಿಯಾ ಸೇವೆಗಳನ್ನ ರಿಸ್ಟೋರ್‌ ಮಾಡಲಾಗುತ್ತೆ ಅಂತ PTA ಹೇಳಿದೆ.

-masthmagaa.com

Contact Us for Advertisement

Leave a Reply