ಪಾಕಿಸ್ತಾನ ನಮ್ಮ ಪ್ರಮುಖ ಅಂತಾರಾಷ್ಟ್ರೀಯ ಪಾಲುದಾರ ಎಂದ ರಷ್ಯಾ!

masthmagaa.com:

ಆರ್ಥಿಕ ಬಿಕ್ಕಟ್ಟನ್ನ ಫೇಸ್‌ ಮಾಡ್ತಿರುವ ಪಾಕಿಸ್ತಾನಕ್ಕೆ ರಿಯಾಯಿತಿ ದರದಲ್ಲಿ ರಷ್ಯಾ ಕಳುಹಿಸಿದ್ದ ತೈಲ ಕರಾಚಿ ಬಂದರಿಗೆ ತಲುಪಿದೆ. ಈ ವೇಳೆ ಪಾಕಿಸ್ತಾನದ ಜೊತೆಯಲ್ಲಿನ ದ್ವಿಪಕ್ಷೀಯ ಸಂಬಂಧವನ್ನ ವಿಸ್ತರಿಸೋಕೆ ಮತ್ತು ಇನ್ನಷ್ಟು ಡೀಪ್‌ ಆಗಿ ತೆಗೆದುಕೊಂಡು ಹೋಗೋಕೆ ರಷ್ಯಾ ಉತ್ಸುಕವಾಗಿದೆ ಅಂತ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್‌ ಹೇಳಿದ್ದಾರೆ. ರಷ್ಯಾ ಹಾಗೂ ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧದ 75ನೇ ವಾರ್ಷಿಕೋತ್ಸವ ಆಚರಣೆ ಸಂದರ್ಭದಲ್ಲಿ ಲಾವ್ರೋವ್‌ ಅವ್ರು ವಿಡಿಯೋ ಮೂಲಕ ಪಾಕಿಸ್ತಾನಕ್ಕೆ ಮೆಸೇಜ್‌ ಕಳಿಸಿದ್ದಾರೆ. ಅದ್ರಲ್ಲಿ ಗಡಿ ಅಪರಾಧ ಮತ್ತು ಭಯೋತ್ಪಾದನೆ ಸೇರಿದಂತೆ ಭದ್ರತಾ ಸವಾಲು ಹಾಗೂ ಬೆದರಿಕೆಗಳನ್ನ ಎದುರಿಸುವ ಪ್ರಯತ್ನಗಳಲ್ಲಿ ಪಾಕಿಸ್ತಾನವನ್ನ ಪ್ರಮುಖ ಅಂತಾರಾಷ್ಟ್ರೀಯ ಪಾಲುದಾರ ಎಂದು ರಷ್ಯಾ ಪರಿಗಣಿಸುತ್ತೆ ಅತ ಲಾವ್ರೋವ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply