ಬಹು ದಿನಗಳ ನಂತ್ರ ತಾಲಿಬಾನ್‌ ನಾಯಕರ ಪಾಕ್‌ ಭೇಟಿ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಅಪ್ಘಾನ್‌ ಮಿಲಟರಿ ಇಂಟಲಿಜೆನ್ಸಿಯ ಉಪ ನಾಯಕ, ತಾಲಿಬಾನ್‌ನ ಹಾಜಿ ಮುಲ್ಲಾ ಶಿರಿನ್‌ ಪಾಕ್‌ಗೆ ಭೇಟಿ ನೀಡಿದ್ದಾರೆ. ಅಲ್ಲದೆ ಪಾಕ್‌ ಹಂಗಾಮಿ ವಿದೇಶಾಂಗ ಸಚಿವ ಜಲೀಲ್‌ ಅಬ್ಬಾಸ್‌ ಜಿಲಾನಿ ಜೊತೆ ಮಾತುಕತೆ ನಡೆಸಿದ್ದಾರೆ. ಅಪ್ಘಾನಿಸ್ತಾನ-ಪಾಕಿಸ್ತಾನ ದೇಶಗಳ ನಡುವಿನ ಭಯೋತ್ಪಾದನೆಯ ಬಿಕ್ಕಟ್ಟಿನ ಮಧ್ಯೆ ಶಾಂತಿ, ಸುಭದ್ರತೆ ಕಾಪಾಡೋ ಕುರಿತು ಉಭಯ ನಾಯಕರು ಡಿಸ್‌ಕಸ್‌ ಮಾಡಿದ್ದಾರೆ. ಈ ವೇಳೆ ಅಪ್ಘಾನಿಸ್ತಾನ್ ಜೊತೆ ಪ್ರಾದೇಶಿಕ ವ್ಯಾಪಾರ ಹಾಗೂ ಪ್ರಯೋಜನಾಕಾರಿ ಒಪ್ಪಂದಕ್ಕೆ ನಾವು ಬದ್ದರಾಗಿದ್ದೀವಿ ಅಂತ ಜಿಲಾನಿ ಅಭಯ ಹಸ್ತ ನೀಡಿದ್ದಾರೆ. ಉಭಯ ದೇಶಗಳ ಮಧ್ಯೆ ಇರೋ ಸಮಸ್ಯೆಗಳನ್ನ ಬಗೆಹರಿಸೋ ಬಗ್ಗೆಯೂ ಜಿಲಾನಿ-ಶಿರಿನ್‌ ಚರ್ಚೆ ಮಾಡಿದ್ದಾರೆ ಅಂತ ಗೊತ್ತಾಗಿದೆ. ಅಂದ್ಹಾಗೆ ಹಲವು ತಿಂಗಳ ನಂತರದ ಅಫ್ಘನ್‌ ನಾಯಕರೊಬ್ಬರ ಪಾಕ್‌ ಭೇಟಿ ತೀವ್ರ ಕುತೂಹಲ ಮೂಡಿಸಿದೆ ಅಂತ ವಿಶ್ಲೇಷಿಸಲಾಗಿದೆ.

-masthmagaa.com

Contact Us for Advertisement

Leave a Reply