ಅತ್ಯಾಚಾರಿಗಳನ್ನು ನಪುಂಸಕರನ್ನಾಗಿ ಮಾಡೋ ಕಾನೂನು ಕೈಬಿಟ್ಟ ಪಾಕ್!

masthmagaa.com:

ಪಾಕಿಸ್ತಾನ ಸರ್ಕಾರ ಅತ್ಯಾಚಾರಕ್ಕೆ ಸಂಬಂಧಿಸಿದ ಹೊಸ ಕಾನೂನಿನಲ್ಲಿ ಒಂದು ಅಂಶವನ್ನು ತೆಗೆದು ಹಾಕಲು ನಿರ್ಧರಿಸಿದೆ. ಇಮ್ರಾನ್ ಖಾನ್ ಸರ್ಕಾರ ಅತ್ಯಾಚಾರಿಗಳನ್ನು ರಾಸಾಯನಿಕ ಬಳಸೋ ಮೂಲಕ ನಪುಂಸಕರನ್ನಾಗಿ ಮಾಡೋ ಅಂಶವನ್ನು ಕಾನೂನಿನಲ್ಲಿ ಉಲ್ಲೇಖಿಸಿತ್ತು. ಆದ್ರೆ ಪಾಕಿಸ್ತಾನದ ಕೌನ್ಸಿಲ್ ಆಫ್ ಇಸ್ಲಾಮಿಕ್ ಐಡಿಯಾಲಜಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದು ಇಸ್ಲಾಂಗೆ ವಿರುದ್ಧವಾಗಿದೆ ಅಂತ ಹೇಳಿದೆ. ಸರ್ಕಾರದ ಎಲ್ಲಾ ಕಾನೂನುಗಳು ಶರಿಯಾ ಕಾನೂನು ಮತ್ತು ಖುರಾನ್​​ಗೆ ಅನುಗುಣವಾಗಿರಬೇಕೆಂದು ಪಾಕಿಸ್ತಾನದ ಸಂವಿಧಾನದ ಆರ್ಟಿಕಲ್ 227ರಲ್ಲಿ ಹೇಳಲಾಗಿದೆ. ಅದ್ರ ವಿರುದ್ಧ ಯಾವುದೇ ಕಾನೂನು ಪಾಸ್ ಮಾಡಲು ಸಾಧ್ಯವಿಲ್ಲ. ಕೌನ್ಸಿಲ್ ಆಫ್ ಇಸ್ಲಾಮಿಕ್ ಐಡಿಯಾಲಜಿ ಪಾಕಿಸ್ತಾನದಲ್ಲಿ ಒಂದು ರೀತಿಯ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಸರ್ಕಾರ ಮತ್ತು ಸಂಸತ್​​ಗೆ ಇಸ್ಲಾಂಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಲಹೆ ನೀಡೋ ಕೆಲಸ ಮಾಡುತ್ತೆ. ಹೀಗಾಗಿ ಅದು ನೀಡಿದ ಸಲಹೆ ಮೇರೆಗೆ ಕಾನೂನಿನಿಂದ ಶಿಕ್ಷೆಯನ್ನು ಕೈಬಿಡಲಾಗಿದೆ. ಈ ಮೂಲಕ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ತರಬೇಕೆಂಬ ಜನರ ಬೇಡಿಕೆಯನ್ನು ಇಮ್ರಾನ್ ಖಾನ್ ಸರ್ಕಾರ ತಿರಸ್ಕರಿಸಿದೆ. ಅತ್ಯಾಚಾರಿಗಳನ್ನು ಬೇಗನೇ ಅಪರಾಧಿಗಳೆಂದು ಘೋಷಿಸಿ, ಶಿಕ್ಷೆ ವಿಧಿಸಲು ಅವಕಾಶ ನೀಡುವ, ಕಠಿಣ ಶಿಕ್ಷೆ ವಿಧಿಸೋ ಈ, ದಿ ಕ್ರಿಮಿನಲ್ ಲಾ ಬಿಲ್​​ 2021ನ್ನು ಬುಧವಾರವಷ್ಟೇ ಸಂಸತ್​​ನಲ್ಲಿ ಪಾಸ್ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply