ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ನೀಡಿದ್ದ ಭದ್ರತೆ ಹಿಂಪಡೆದ ಪಾಕಿಸ್ತಾನ! ಕಾರಣವೇನು?

masthmagaa.com:

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವ್ರ ನಿವಾಸಕ್ಕೆ ಒದಗಿಸಲಾಗಿದ್ದ ಭದ್ರತೆಯನ್ನ ಅಲ್ಲಿನ ಸರ್ಕಾರ ಹಿಂಪಡೆದಿದೆ. ಪಾಕಿಸ್ತಾನ ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವ್ರು ನನ್ನ ಹತ್ಯೆ ನಡೆಸೋಕೆ ಸಂಚು ರೂಪಿಸಿದ್ರು. ಇತ್ತೀಚೆಗೆ ನಡೆದ ತನ್ನ ಹತ್ಯೆ ಪ್ರಯತ್ನಕ್ಕೆ ಜರ್ದಾರಿ ಅವರೇ ಕಾರಣ. ಇದಕ್ಕಾಗಿ ಜರ್ದಾರಿ ಉಗ್ರರಿಗೆ ಹಣ ನೀಡಿ ಕೆಲಸ ಒಪ್ಪಿಸಿದ್ರು ಅಂತ ಖಾನ್‌ ಆರೋಪಿಸಿದ್ದಾರೆ. ಹೀಗಾಗಿ ಖಾನ್‌ ಅವರಿಗೆ ನೀಡಲಾಗಿದ್ದ ಭದ್ರತೆಯನ್ನ ತೆಗೆದು ಹಾಕಲಾಗಿದೆ ಅಂತ ಹೇಳಲಾಗ್ತಿದೆ. ಆದ್ರೆ ಇದಕ್ಕೆ ಪ್ರತಿಕ್ರಿಯೆ ನೀಡಿರೋ ಪೊಲೀಸರು, ಖೈಬರ್‌ ಪಖ್ತುಂಖ್ವಾದಲ್ಲಿರೋ ಖಾನ್‌ ಅವ್ರ ಬನಿ ಗಾಲ ನಿವಾಸವು ಖಾಸಗಿಯಾಗಿದ್ದು, ಇಸ್ಲಮಾಬಾದ್‌ ಪೊಲೀಸರು ಇಲ್ಲಿ ಭದ್ರತೆ ನೀಡೋಕೆ ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ವಿತ್‌ಡ್ರಾ ಮಾಡಲಾಗಿದೆ ಅಂತ ಹೇಳಿದ್ದಾರೆ. ಇತ್ತ ಪೆಟ್ರೋಲ್ ಬೆಲೆಯಲ್ಲಿ ಭಾರಿ ಏರಿಕೆಯಾಗುವ ವದಂತಿಗಳು ಹಬ್ಬಿದ್ದು ಪಾಕಿಸ್ತಾನದ ಹಲವು ಭಾಗಗಳಲ್ಲಿ ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ ಅಂತ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಮತ್ತೊಂದು ಕಡೆ ಪಾಕಿಸ್ತಾನ ತನ್ನ 2022-23ರ ಬಜೆಟ್‌ ಅಂದಾಜಿನಲ್ಲೇ 2 ಲಕ್ಷ ಕೋಟಿ ಪಾಕಿಸ್ತಾನ ರೂಪಾಯಿಗಳನ್ನ ಜಾಸ್ತಿ ಖರ್ಚು ಮಾಡಿದೆ ಅಂತ ಗೊತ್ತಾಗಿದೆ. ಐಎಂಎಫ್‌ ನಡೆಸಿದ ಆರಂಭಿಕ ಮೌಲ್ಯಮಾಪನದಿಂದ ಈ ವಿಚಾರ ತಿಳಿದು ಬಂದಿದೆ. ಅಂದ್ಹಾಗೆ ಹಣಕಾಸು ನೆರವು ನೀಡಲು ಐಎಂಎಫ್‌ ಅಧಿಕಾರಿಗಳು ಪರಿಶೀಲನೆ ಮಾಡೋಕೆ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಈ ಪರಿಶೀಲನೆ ಮಾಡೋ ವೇಳೆ ಪಾಕ್‌ ತನ್ನ ಬಜೆಟ್‌ ಅಂದಾಜಿಗಿಂತ ಅಧಿಕ ಖರ್ಚುಮಾಡಿದೆ ಅನ್ನೋದು ಗೊತ್ತಾಗಿದೆ.

-masthmagaa.com

Contact Us for Advertisement

Leave a Reply