ಇರಾನ್-ಪಾಕ್‌ ಗುದ್ದಾಟಕ್ಕೆ ಬ್ರೇಕ್‌: ಪಾಕ್‌ ಶಾಂತಿ‌ ಮಂತ್ರ ಪಠಣ!

masthmagaa.com:

ಇರಾನ್‌ ಹಾಗೂ ಪಾಕಿಸ್ತಾನ ಉದ್ವಿಗ್ನತೆ ತಣ್ಣಗಾಗಿಸಲು ಒಪ್ಕೊಂಡಿವೆ ಅಂತ ವರದಿಯಾಗಿದೆ. ಈ ಮೂಲಕ ಕಳೆದ ವಾರದಿಂದ ಉಭಯ ದೇಶಗಳು ಪರಸ್ಪರ ನಡೆಸಿದ್ದ ಏರ್‌ ಸ್ಟ್ರೈಕ್‌ಗೆ… ಪಾಕಿಸ್ತಾನ ಮಾಡಿದ್ದನ್ನ ಏರ್‌ಸ್ಟ್ರೈಕ್‌ ಅನ್ನೋಕಾಗಲ್ಲ. ಡ್ರೋನ್‌ ಕಳಿಸಿ, ಮಹಿಳೆ, ಮಕ್ಕಳನ್ನ ಕೊಂದಿತ್ತು. ಅದೂ ಪಾಕ್‌ ಮೂಲದವ್ರನದನೇ.. ಈ ದಾಳಿಗಳಿಗೆ ಇದೀಗ ಬ್ರೇಕ್‌ ಬಿದ್ದಂತಾಗಿದೆ. ಆದ್ರೂ ಇರಾನ್‌ ಶುಕ್ರವಾರ ಒಂದು ಏರ್‌ ಡಿಫೆನ್ಸ್‌ ಡ್ರಿಲ್‌ನ್ನ ಯಶಸ್ವಿಯಾಗಿ ಕಂಡಕ್ಟ್‌ ಮಾಡಿದೆ. ಮತ್ತೊಂದೆಡೆ ಜನವರಿ 3ರಂದು ಇರಾನ್‌ನ ಕಿರ್ಮನ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಜೈಶ್‌ ಅಲ್-ಅದಲ್ ಉಗ್ರರ ಕೈವಾಡವಿದೆ. ಈ ಬಗ್ಗೆ ನಮ್ಮಲ್ಲಿ ಸಾಕ್ಷಿಗಳವೆ. ಪಾಕಿಸ್ತಾನದ ಬಳಿ ಈ ವಿಚಾರವನ್ನ ಪ್ರಸ್ತಾಪ ಮಾಡಿದ್ವಿ. ಆದ್ರೂ ಪಾಕಿಸ್ತಾನ ಅವ್ರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಅದಕ್ಕೇ ನಾವು ದಾಳಿ ಮಾಡ್ಬೇಕಾಯ್ತು ಅಂತ ಇರಾನ್‌ ಭದ್ರತಾ ಪಡೆ ಅಧಿಕಾರಿಯೊಬ್ರು ಹೇಳಿಕೆ ನೀಡಿದ್ದಾರೆ. ಇತ್ತ ಪಾಕಿಸ್ತಾನ ಹಂಗಾಮಿ ಪ್ರಧಾನಿ ಅನ್ವರುಲ್‌ ಹಕ್‌ ಕಕ್ಕರ್ ಮಾತ್ರ, ಪಾಕಿಸ್ತಾನ ಕಾನೂನನ್ನ ಪಾಲಿಸೋ ಶಾಂತಿ ಪ್ರಿಯ ರಾಷ್ಟ್ರ ಅಂದಿದ್ದಾರೆ. ಅಲ್ಲದೇ ಪಾಕ್‌ ತನ್ನ ನೆರೆಹೊರೆಯ ದೇಶಗಳ ಜೊತೆಗೆ ಸೌಹಾರ್ದತೆಯಿಂದ ಇರೋಕೆ ಇಚ್ಚಿಸುತ್ತೆ. ಇರಾನ್‌ ತನ್ನಲ್ಲಿರೋ ಸಣ್ಣ ಉಗ್ರಗುಂಪುಗಳ ಜೊತೆ ಮಾತುಕತೆ ನಡೆಸಬಹುದು. ನಂತರ ಇರಾನ್‌, ಪಾಕಿಸ್ತಾನಗಳು ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆಗಳನ್ನ ಬಗೆಹರಿಸಿಕೊಳ್ಭೋದು ಅಂದಿದ್ದಾರೆ. ಅಲ್ಲದೆ ಉಭಯ ದೇಶಗಳ ವಿದೇಶಾಂಗ ಸಚಿವರು ಶುಕ್ರವಾರ ಡಿಸ್‌ಕಸ್‌ ಮಾಡಿದ್ದಾರೆ. ಈ ಬಳಿಕ ಮಾತನಾಡಿರೋ ಪಾಕ್‌ ವಿದೇಶಾಂಗ ಸಚಿವ ಜಲೀಲ್‌ ಅಬ್ಬಾಸ್‌ ಜಿಲಾನಿ, ಉಭಯ ದೇಶಗಳ ಮಧ್ಯೆ ಭದ್ರತೆ ಹಾಗೂ ಪರಸ್ಪರ ಸಹಕಾರದ ಅಗತ್ಯತೆ ಇದೆ. ನಾವಂತೂ ಈ ದೆಸೆಯಲ್ಲಿ ಇರಾನ್‌ನೊಂದಿಗೆ ನಂಬಿಕೆಯಿಂದ ಕೆಲ್ಸ ಮಾಡೋಕೆ ಬಯಸ್ತೇವೆ. ಇರಾನ್‌ ಜೊತೆ ಉದ್ವಿಗ್ನತೆ ಹೆಚ್ಚಾಗಬೇಕು ಅಂತ ಪಾಕ್‌ ಇಷ್ಟ ಪಡಲ್ಲ. ಹೀಗೆ ಭೂತದ ಬಾಯಲ್ಲಿ ಭಗವದ್ಗೀತೆ ಅನ್ನೋ ತರ ಜಿಲಾನಿ ಮಾತಾಡಿದ್ದಾರೆ

-masthmagaa.com

Contact Us for Advertisement

Leave a Reply