ಪಾಕಿಸ್ತಾನದಲ್ಲಿ ದೊಡ್ಡ ಉಗ್ರದಾಳಿ! 7 ಮಂದಿ ಪಾಕ್‌ ಸೈನಿಕರ ಸಾವು!

masthmagaa.com:

ಪಾಕಿಸ್ತಾನದಲ್ಲಿ ಭೀಕರ ಉಗ್ರದಾಳಿಯಾಗಿದೆ. ತಾಲಿಬಾನ್‌ ಆಡಳಿತದ ಅಫ್ಘಾನ್‌ ಗಡಿ ಸಮೀಪ ಅಂದ್ರೆ ಪಾಕಿಸ್ತಾನದ ನಾರ್ತ್‌ವೆಸ್ಟ್‌ನಲ್ಲಿರೋ ಪಾಕ್‌ ಮಿಲಿಟರಿ ಪೋಸ್ಟ್‌ ಮೇಲೆ ಉಗ್ರರು ಆತ್ಮಾಹುತಿ ದಾಳಿ ಮಾಡಿದ್ದಾರೆ. ಮಾರ್ಚ್‌ 16ರಂದು ವಾಹನಗಳಲ್ಲಿ ಭಾರೀ ಸ್ಪೋಟಕಗಳನ್ನ ಲೋಡ್‌ ಮಾಡ್ಕೊಂಡ್‌ ಪೋಸ್ಟ್‌ಗೆ ನುಗ್ಗಿದಾರೆ. ಪರಿಣಾಮ ಕನಿಷ್ಠ 7 ಪಾಕ್‌ ಸೈನಿಕರು ಹತ್ಯೆಯಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಇನ್ನು ಈ ದಾಳಿಯಲ್ಲಿ ಯಾರ ಕೈವಾಡವಿದೆ ಅಂತ ಪಾಕಿ ಸೇನೆ ಮಾಹಿತಿ ನೀಡಿಲ್ಲ. ಆದ್ರೆ ʻ6 ಮಂದಿ ಉಗ್ರರ ಗುಂಪೊಂದು ದಾಳಿ ನಡೆಸಿದೆ. ದೊಡ್ಡ ಪ್ರಮಾಣದ ಆತ್ಮಾಹುತಿ ಸ್ಫೋಟಕಗಳನ್ನ ಇದರಲ್ಲಿ ಬಳಕೆ ಮಾಡಲಾಗಿತ್ತು. ಪರಿಣಾಮ ಸೇನಾ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದೆ. ಇದ್ರಿಂದ 7 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆʼ ಅಂತ ಹೇಳಿದೆ. ಆದ್ರೆ ಜೈಶ್‌-ಎ-ಫುರ್ಸನ್‌-ಎ-ಮೊಹಮ್ಮದ್‌ ಅನ್ನೋ ಉಗ್ರ ಸಂಘಟನೆ ಪಾಕ್‌ ಸೇನೆ ಮೇಲೆ ದಾಳಿ ಮಾಡಿದ್ದು ನಾವು ಅಂತ ಅವರು ಈ ದಾಳಿ ಹೊಣೆಯನ್ನ ಹೊತ್ಕೊಂಡಿದ್ದಾರೆ. ಇನ್ನು ಪಾಕಿಸ್ತಾನದ ನೂತನ ಅಧ್ಯಕ್ಷರಾದ ಆಸಿಫ್‌ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್‌ ಶರೀಫ್‌ ಈ ದಾಳಿಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಇತ್ತ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಪಾಕ್‌ನ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ವಜರಿಸ್ತಾನ್‌ ಜಿಲ್ಲೆಯಲ್ಲಿ ಪ್ರತಿದಾಳಿ ಮಾಡಿದ್ದೀವಿ ಅಂತ ಪಾಕ್‌ ಸೇನೆ ಹೇಳಿಕೊಂಡಿದೆ. ಪ್ರತಿದಾಳಿಯಲ್ಲಿ ಆರು ಉಗ್ರರನ್ನ ಹತ್ಯೆ ಮಾಡಲಾಯ್ತು ಅಂತ ಮಾಹಿತಿ ನೀಡಿದೆ. ಅಂದ್ಹಾಗೆ ಈ ಉಗ್ರರು ಪಾಕ್‌ ಗಡಿಯೊಳಗೆ ಒಳನುಸುಳೋದನ್ನ ತಡೆಯೋಕೆ ಪಾಕ್‌ ಪಡೆಗಳು ಆರಂಭದಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ರಂತೆ. ಆದ್ರೆ ಈ ಪ್ರಯತ್ನ ಮಾಡುವಾಗಲೇ ದಾಳಿಕೋರರು ಮಿಲಿಟರಿ ಪೋಸ್ಟ್‌ ಒಳಗೆ ಸ್ಪೋಟಕ ತುಂಬಿದ ವಾಹನವನ್ನ ನುಗ್ಗಿಸಿದ್ದಾರೆ. ಈ ದಾಳಿಯ ತೀವ್ರತೆ ಎಷ್ಟರ ಮಟ್ಟಿಗಿದೆ ಅಂದ್ರೆ ಒಂದಿಡೀ ಸೇನಾ ಪೋಸ್ಟ್‌ ನುಚ್ಚುನೂರಾಗಿದೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

-masthmagaa.com

Contact Us for Advertisement

Leave a Reply