ಉಗ್ರ ಹಫೀಜ್‌ ವಿಚಾರ: ಭಾರತದ ಮನವಿಗೆ ಡೊಂಟ್‌ ಕೇರ್ ಅಂದ ಪಾಕ್!

masthmagaa.com:

2008ರ ಮುಂಬೈ ದಾಳಿಯ ರೂವಾರಿ, ಲಷ್ಕರ್‌ ಸಂಘಟನೆ ಸ್ಥಾಪಕ ಹಫೀಜ್‌ ಸಯೀದ್‌ನನ್ನ ಭಾರತಕ್ಕೆ ಹಸ್ತಾಂತರಿಸೊಲ್ಲ ಅಂತ ಪಾಕಿಸ್ತಾನ ಹೇಳಿದೆ. ಹಫೀಜ್‌ನನ್ನ ಹಸ್ತಾಂತರಿಸುವಂತೆ ಭಾರತ ಪಾಕ್‌ಗೆ ಇತ್ತೀಚಿಗಷ್ಟೇ ಮನವಿ ಮಾಡಿತ್ತು. ಇದೀಗ ಇದಕ್ಕೆ ಪಾಕಿಸ್ತಾನ ರಿಯಾಕ್ಟ್‌ ಮಾಡಿದೆ. ಪಾಕ್‌ ವಿದೇಶಾಂಗ ವಕ್ತಾರೆ ಮುಮ್ತಾಜ್‌ ಜಾಹ್ರಾ ಬಲೋಚ್‌, ʻಭಾರತ ಸೋ ಕಾಲ್ಡ್ ಮನಿ ಲಾಂಡರಿಂಗ್‌ ಕೇಸ್‌ನಲ್ಲಿ ಹಫೀಸ್‌ ಸಯೀದ್‌ ಹಸ್ತಾಂತರ ಮಾಡಿ ಅಂತ ಕೇಳಿದೆ. ಉಭಯ ದೇಶಗಳ ಮಧ್ಯೆ ಯಾವುದೇ ದ್ವಿಪಕ್ಷೀಯ ಹಸ್ತಾಂತರದ ಒಪ್ಪಂದಗಳಿಲ್ಲ. ಹೀಗಾಗಿ ಹಫೀಜ್‌ನನ್ನ ಹಸ್ತಾಂತರಿಸೋಕ್ಕಾಗಲ್ಲ ಅಂತೇಳಿದೆ. ಇತ್ತ ಹಫೀಜ್‌ ಸಯೀದ್‌ನ ಪುತ್ರ ತಾಹ್ಲ ಸಯೀದ್‌ ಮುಂಬರೋ ಪಾಕ್‌ ಎಲೆಕ್ಷನ್‌ಗೆ ಸ್ಪರ್ಧಿಸುತ್ತಿರೋದಕ್ಕೆ ಭಾರತ ವಿರೋಧ ವ್ಯಕ್ತ ಪಡಿಸಿದೆ. ಪಾಕಿಸ್ತಾನದಲ್ಲಿ ಮೇನ್‌ಸ್ಟ್ರೀಮ್‌ ಉಗ್ರರು ಸರ್ಕಾರದ ಭಾಗವಾಗಿರೋದು ಹೊಸ ವಿಚಾರವೇನಲ್ಲ. ಆದ್ರೂ, ಇಂತಹ ಬೆಳವಣಿಗೆಗಳು ಈ ಪ್ರದೇಶದ ಮೇಲೆ ಗಂಭೀರ ಪರಿಣಾಮವನ್ನ ಬೀರುತ್ವೆ. ಇವುಗಳನ್ನ ಭಾರತ ನಿರಂತರವಾಗಿ ಮಾನಿಟರ್‌ ಮಾಡುತ್ತೆʼ ಅಂತ ಭಾರತದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ.

-masthmagaa.com

Contact Us for Advertisement

Leave a Reply