ಭಯೋತ್ಪಾದನೆಯಲ್ಲ, ಸ್ವಾತಂತ್ರ್ಯ ಹೋರಾಟ: ಇಮ್ರಾನ್ ಖಾನ್

ಜಮ್ಮು ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಹೊಸ ಆರೋಪ ಮಾಡಿದೆ. ಕಾಶ್ಮೀರಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಭಾರತೀಯರು ಅದಕ್ಕೆ ಇಸ್ಲಾಮಿಕ್ ಭಯೋತ್ಪಾದನೆ ಎಂಬ ಹಣೆಪಟ್ಟಿ ಕಟ್ಟುತ್ತಿದ್ದಾರೆ ಎಂದಿದ್ದಾರೆ. ಅಲ್ಲದೆ ಪಾಕಿಸ್ತಾ­ನದ ಜನತೆ ಮತ್ತು ಸರಕಾರ­ದಿಂದ ಕಾಶ್ಮೀರಿಗಳಿಗೆ ಬೆಂಬಲ ಮುಂದುವರಿಯಲಿದೆ ಅನ್ನೋ ಮೂಲಕ ಪರೋಕ್ಷವಾಗಿ ಭಯೋತ್ಪಾದನೆಗೆ ಬೆಂಬಲವಿದೆ ಎಂದಿದ್ದಾರೆ. ಜೊತೆಗೆ ಜಮ್ಮು ಕಾಶ್ಮೀರದ ಜನತೆಯ ನೋವು ನನಗೆ ಅರ್ಥವಾಗುತ್ತಿದೆ. ಅಲ್ಲಿನ ಜನತೆ 2 ತಿಂಗಳಿಂದ ಅಮಾನವೀಯ ಕಫ್ರ್ಯೂನಿಂದ ಚಿತ್ರಹಿಂಸೆ ಅನುಭವಿಸ್ತಿದ್ದಾರೆ ಎಂದು ಟೀಟ್ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಖಾನ್, ಯಾರಾದರೂ ಪಾಕಿಸ್ತಾನಿಗಳು ಗಡಿ ನಿಯಂತ್ರಣ ರೇಖೆ ದಾಟಿ ಕಾಶ್ಮೀರದ ಜನತೆಗೆ ಸಹಾಯ ಮಾಡಲು ಹೋದ್ರೆ ಪಾಕ್ ಪ್ರಾಯೋಜಿತ ಇಸ್ಲಾಮಿಕ್ ಭಯೋತ್ಪಾದನೆ ಅಂತ ಹಣೆಪಟ್ಟಿ ಕಟ್ಟುತ್ತಾರೆ ಎಂದು ಕಿಡಿಕಾರಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನ ಕಿತ್ತುಕೊಂಡ ಬಳಿಕ ಪಾಕಿಸ್ತಾನ ಎಲ್ಲರಿಗಿಂತ ಹೆಚ್ಚು ಟೆನ್ಶನ್ ಮಾಡಿಕೊಂಡಂತಿದೆ. ವಿಶ್ವಮಟ್ಟದಲ್ಲಿ ಮಾನ ಕಳೆದುಕೊಂಡರೂ ಪಾಕ್‍ಗೆ ಬುದ್ಧಿ ಬರುತ್ತಿಲ್ಲ.

Contact Us for Advertisement

Leave a Reply