ಅಂತರಾಷ್ಟ್ರೀಯ ಸಂಸ್ಥೆಗಳಿಂದ ಸಾಲ ಪಡೆಯೋಕೆ ಪಾಕಿಸ್ತಾನ ಏನ್‌ ಮಾಡ್ತಿದೆ ನೋಡಿ!

masthmagaa.com:

ಪಾಕ್‌ನ ಪಂಜಾಬ್‌ ಪ್ರಾಂತ್ಯದ ಪೊಲೀಸರು ಸುಮಾರು 9 ಮಂದಿ ಉಗ್ರರನ್ನ ಅರೆಸ್ಟ್‌ ಮಾಡಿದ್ದಾರೆ ಅಂತ ಪಾಕ್‌ ಆಡಳಿತ ಅನೌನ್ಸ್‌ ಮಾಡಿದೆ. ಇದರಲ್ಲಿ ನಾಲ್ವರು IS ಉಗ್ರರೂ ಇದ್ದು ಇನ್ನುಳಿದವರು ಟಿಟಿಪಿ ಹಾಗೂ ಲಷ್ಕರ್‌ ಸಂಘಟನೆಯವರು ಅಂತ ಹೇಳಲಾಗಿದೆ. ಅಲ್ದೇ ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ಕೂಡ ವಶಕ್ಕೆ ಪಡೆಯಲಾಗಿದೆ ಅಂತ ಮಾಹಿತಿ ನೀಡಿದೆ. ಅಂದ್ಹಾಗೆ ಕಳೆದ ವಾರ ಕೂಡ ಸಿಟಿಡಿ ಅಂದ್ರೆ ಪಾಕಿಸ್ತಾನದಲ್ಲಿರೋ ಭಯೋತ್ಪಾದನಾ ನಿಗ್ರಹ ವಿಭಾಗ ಸುಮಾರು 11 ಮಂದಿ ಉಗ್ರರನ್ನ ಬಂಧಿಸಲಾಗಿದೆ ಅಂತ ಪಾಕ್‌ ಹೇಳಿತ್ತು. ಆರ್ಥಿಕ ದುಸ್ಥಿತಿಯಿಂದ ದಿವಾಳಿಯಾಗೋ ಕಡೆಗೆ ಓಡ್ತಿರೋ ಪಾಕಿಸ್ತಾನ ಸದ್ಯ FATF ಗ್ರೇ ಲಿಸ್ಟ್‌ನಿಂದ ಹೊರಬರೋಕೆ ಇನ್ನಿಲ್ಲದ ಪ್ರಯತ್ನ ಮಾಡ್ತಿದೆ. ಇದರ ಭಾಗವಾಗಿ ಈಗ ತನ್ನ ಅಂತರಂಗ ಶುದ್ಧಿ ಮಾಡಿಕೊಳ್ತಿದೆ. ಅಂತರಂಗ ಶುದ್ದಿಯೋ ಅಥವಾ ಇದು ಇನ್ನೊಂದು ರೀತಿಯ ನಾಟಕವೋ? ಆದ್ರೆ ಸಾಲಕ್ಕಾಗಿ ಇದನ್ನ ಮಾಡ್ತಿದ್ದಾರೆ ಅನ್ನೋದು ಮಾತ್ರ ಎಲ್ಲರಿಗೂ ಗೊತ್ತಿರೋ ವಿಚಾರ. ಯಾಕಂದ್ರೆ ಪಾಕಿಸ್ತಾನದಿಂದ ಉಗ್ರರಿಗೆ ಹಣಕಾಸು ನೆರವು ಹೋಗ್ತಿದೆ ಅಂತ Financial Action Task Forceನ ಬೂದು ಪಟ್ಟಿಯಲ್ಲಿದೆ. ಇದರಿಂದ ಸಾಲ ಕೊಡಿ ಅಂತ ತಟ್ಟೆ ಹಿಡ್ಕೊಂಡು ವಿಶ್ವಪರ್ಯಟನೆ ಮಾಡಿದ್ರೂ ಪಾಕ್‌ಗೆ ನಯಾ ಪೈಸಾ ಹುಟ್ತಾಯಿಲ್ಲ. ಕಾದಾಗ ಕಬ್ಬಿಣ ಬಡಿ ಅಂತ ಚೀನಾ ಹಾಗೊಮ್ಮೆ ಈಗೊಮ್ಮೆ ಅಷ್ಟೋ ಇಷ್ಟೋ ಕೊಡುತ್ತಿತ್ತು. ಈಗ ಚೀನಿಯರು ಕೂಡ ಪಾಕಿಗಳನ್ನ ಹತ್ರಕ್ಕೆ ಸೇರಿಸಿಕೊಳ್ತಿಲ್ಲ. ಹೀಗಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಹೇಳಿದ ರೀತಿಯಲ್ಲಿ ಆಡಳಿತ ಮಾಡ್ಬೇಕು. ಅವರು ಸಬ್ಸಿಡಿ ಕೊಡ್ಬೇಡಿ ಅಂದ್ರೆ ಕೊಡ್ಬಾರ್ದು. ಕೊಡಿ ಅಂದ್ರೆ ಕೊಡ್ಬೇಕು. ಇನ್ನು ಪಾಕಿಗಳನ್ನ ಈ ಲಿಸ್ಟ್‌ನಿಂದ ತೆಗೆದು ಹಾಕ್ಕೋಕ್ಕೆ ಈಗ ಕೆಲ ತಯಾರಿಗಳೂ ಕೂಡ ನಡೀತಿದ್ದು ಹೀಗಾಗಿ ಈಗ ಪಾಕ್ ಉಗ್ರರನ್ನ ಹಿಡಿದು ನಾವು ಕ್ರಮ ತೆಗೆದುಕೊಳ್ತೀವಿ ನೋಡಿ ಅಂತ ಬಿಂಬಿಸೋಕೆ ಈ ರೀತಿ ಮಾಡ್ತಿದೆ. ಇದರ ನಡುವೆಯೇ ಪಾಕಿಸ್ತಾನ್‌ ಮುಸ್ಲಿಂ ಲೀಗ್(PML)-ಎನ್‌ ಪಕ್ಷದ ನಾಯಕಿ ಮರ್ಯಾಮ್‌ ನವಾಜ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ರ IMF ಜೊತೆಗಿನ ಒಪ್ಪಂದದ ಬಗ್ಗೆ ಹರಿಹಾಯ್ದಿದ್ದಾರೆ. ಖಾನ್‌ ಮತ್ತು IMF ನಡುವಿನ ಒಪ್ಪಂದ ʻಕೆಟ್ಟ ಒಂಪ್ಪಂದʼ ಅಂತ ಕಿಡಿಕಾರಿದ್ದಾರೆ. ಅಲ್ದೇ IMF ಜೊತೆಗೆ ಪಾಕ್‌ ಮಾಡಿಕೊಂಡಿದ್ದ ಒಪ್ಪಂದಗಳನ್ನ ಖಾನ್‌ ಉಲ್ಲಂಘಿಸಿದ್ದಾರೆ. ಸೋ ಈ ಫಿಟ್ನಾ ಖಾನ್‌ ಅಂದ್ರೆ ಈ ದಂಗೆಕೋರ ಇಮ್ರಾನ್‌ ಖಾನ್‌ನಿಂದಾಗಿಯೇ ಅಂತಾರಾಷ್ಟ್ರೀಯ ಸಂಸ್ಥೆಗಳು ಪಾಕಿಸ್ತಾನವನ್ನ ನಂಬ್ತಿಲ್ಲ ಅಂತ ಆರೋಪಿಸಿದ್ದಾರೆ. ಅಂದ್ಹಾಗೆ ಈ ಮರ್ಯಾಮ್‌ ನವಾಜ್‌ ಇಮ್ರಾನ್‌ ಖಾನ್‌ರನ್ನ ತುಂಬಾ ದಿನದಿಂದಲೂ ಕೂಡ ʻಫಿಟ್ನಾ ಖಾನ್ʼ ದಂಗೆಕೋರ ಖಾನ್‌ ಅಂತಾನೇ ಕರೀತಾ ಬಂದಿದ್ದಾರೆ.

-masthmagaa.com

Contact Us for Advertisement

Leave a Reply