ಸಾಲದ ಮರು ಪಾವತಿ ಅವಧಿ ವಿಸ್ತರಿಸಲು ಚೀನಾಗೆ ಮನವಿ ಮಾಡಿದ ಪಾಕ್!

masthmagaa.com:

ಒಂದ್ಕಡೆ ನವಾಜ್‌ ಕಾಶ್ಮೀರದ ವಿಚಾರ ಮಾತಾಡ್ತಿದ್ರೆ ಮತ್ತೊಂದ್ಕಡೆ ಪಾಕ್‌ ಸರ್ಕಾರ ಸಾಲದ ಸುಳಿಯಲ್ಲಿ ನಲುಗ್ತಾ ಇದೆ. ಪಡೆದಿದ್ದ ಸಾಲವನ್ನ ಹಿಂದಿರುಗಿಸಲಾಗದೇ ಭಿಕ್ಷುಕನಂತೆ ಅಸಹಾಯಕತೆ ಮೆರೆದಿದೆ. ಹೌದು ತನ್ನ ಧೀರ್ಘಕಾಲದ ಮಿತ್ರ ರಾಷ್ಟ್ರ ಚೀನಾ ಬಳಿ ಪಡೆದಿದ್ದ ಸಾಲದ ಮರು ಪಾವತಿ ಅವಧಿಯನ್ನ ವಿಸ್ತರಿಸೋಕೆ ಪಾಕ್‌ ಮನವಿ ಮಾಡಿದೆ. ಮಾರ್ಚ್‌ 23 ರಂದು ಮುಕ್ತಾಯಗೊಳ್ಳಲಿರುವ 2 ಬಿಲಿಯನ್‌ ಡಾಲರ್‌ ಅಂದ್ರೆ 16,600 ಕೋಟಿ ರೂಪಾಯಿ ಸಾಲದ ಮರು ಪಾವತಿ ಅವಧಿಯನ್ನ ಎಕ್ಸ್‌ಟೆಂಡ್‌ ಮಾಡಲು ತನ್ನ ಕುಚಿಕು ಚೀನಾಗೆ ರಿಕ್ವೆಸ್ಟ್‌ ಮಾಡಿದೆ. ಈವರೆಗೆ ಪಾಕ್‌ ಚೀನಾ ಬಳಿ ಒಟ್ಟು 4 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 33,000 ಕೋಟಿ ರೂ ಸಾಲ ಪಡೆದಿದೆ. ಅಲ್ಲದೇ ಈ ತಿಂಗಳ ಆರಂಭದಲ್ಲಿ UAE ಕೂಡ ಪಾಕ್‌ಗೆ ನೀಡಿದ್ದ 16ವರೆ ಸಾವಿರ ಕೋಟಿ ರೂಪಾಯಿ ಸಾಲದ ಅವಧಿಯನ್ನ ವಿಸ್ತರಿಸಿತ್ತು. ಇದ್ರ ಮಧ್ಯೆ ಅತ್ತ ಸೌದಿ ಅರೇಬಿಯಾದಿಂದ ಕೂಡ 5 ಬಿಲಿಯನ್‌ ಡಾಲರ್‌ ಅಂದ್ರೆ 41,000 ಕೋಟಿ ರೂಪಾಯಿ ಸಾಲ ಪಡೆದಿದೆ. ಇದೆಲ್ಲ ನೋಡ್ತಿದ್ರೆ ಪಾಕ್‌ ಆರ್ಥಿಕತೆ ಯಾವ ದೈನೇಸಿ ಸ್ಥಿತಿಯಲ್ಲಿದೆ ಅನ್ನೋದು ಗೊತ್ತಾಗುತ್ತೆ.

-masthmagaa.com

Contact Us for Advertisement

Leave a Reply