ಬ್ರಿಕ್ಸ್‌ ಸೇರುವ ಬಗ್ಗೆ ಪಾಕಿಸ್ತಾನ ಹೇಳಿದ್ದೇನು?

masthmagaa.com:

ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯಲ್ಲಿ ಹೊಸದಾಗಿ 6 ದೇಶಗಳನ್ನ ಸೇರಿಸಿಕೊಳ್ಳುವ ಬಗ್ಗೆ ಅನೌನ್ಸ್‌ ಮಾಡಲಾಗಿದೆ. ಜೊತೆಗೆ ಬ್ರಿಕ್ಸ್‌ ಶೃಂಗಸಭೆಗೆ ಸೇರಲು ಸಾಕಷ್ಟು ದೇಶಗಳು ಆಸಕ್ತಿ ತೋರಿಸಿದ್ದು, ಜಾಯಿನ್‌ ಆಗಲು ಮನವಿ ಮಾಡಿವೆ ಅಂತ ಹೇಳಲಾಗಿತ್ತು. ಇದೀಗ ಬ್ರಿಕ್ಸ್‌ ಸೇರಲು ನಾವು ಫಾರ್ಮಲ್‌ ಆಗಿ ಯಾವುದೇ ರೀತಿ ರಿಕ್ವೆಸ್ಟ್‌ ಮಾಡಿಲ್ಲ ಅಂತ ಪಾಕಿಸ್ತಾನ ಹೇಳಿದೆ. ಈ ಬಗ್ಗೆ ಮಾತಾಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರೆ ಮುಮ್ತಾಜ್‌ ಜಹ್ರಾ ಬಲೋಚ್‌, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್‌ನ ಡೆವಲಪ್‌ಮೆಂಟ್‌ಗಳನ್ನ ನಾವು ಗಮನಿಸಿದ್ದೇವೆ. ಸದ್ಯಕ್ಕೆ ನಾವು ಬ್ರಿಕ್ಸ್‌ಗೆ ಸೇರಲು ಔಪಚಾರಿಕ ಮನವಿ ಮಾಡಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಚಿಸುತ್ತೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply