ಪಾಕ್‌ ಸ್ಪೋಟ ಪ್ರಭಾವ: 2 ಸಾವಿರ ಕಾರ್ಮಿಕರ ಕೆಲಸ ಕಟ್‌, ಕಾಮಗಾರಿ ಸ್ಥಗಿತ

masthmagaa.com:

ಪಾಕಿಸ್ತಾನದಲ್ಲಿ ಚೀನೀಯರನ್ನ ಗುರಿಯಾಗಿಸಿ ಉಗ್ರ ದಾಳಿ ನಡೀತಿರೋದು ಚೀನಾಗೆ ನುಂಗಲಾರಾದ ತುತ್ತಾಗಿ ಪರಿಣಮಿಸಿದೆ. ಈಗ ಅದು ಅಲ್ಲಿನ ಕಾಮಗಾರಿಗಳ ಮೇಲೆ ಪರಿಣಾಮ ಬೀರ್ತಿದೆ. ಜಲವಿದ್ಯುತ್‌ ಪ್ರಾಜೆಕ್ಟ್‌ ಒಂದನ್ನ ಮಾಡ್ತಿದ್ದ ಚೀನಾ ಕಂಪನಿ ಈಗ ತನ್ನ ಕಾಮಗಾರಿಯನ್ನ ಅರ್ಧಕ್ಕೆ ನಿಲ್ಸಿದೆ.ಅಲ್ದೆ ಪವರ್‌ ಕನ್‌ಸ್ಟ್ರಕ್ಷನ್‌ ಕಾರ್ಪೊರೇಷನ್‌ ಆಫ್‌ ಚೀನಾ ಅನ್ನೋ ಈ ಕಂಪನಿ ಬರೋಬ್ಬರಿ 2,000 ಕಾರ್ಮಿಕರನ್ನ ವಜಾ ಮಾಡಿದೆ. 2021ರಿಂದ ಗೆಜೋಬಾ ಅನ್ನೋ ಕಂಪನಿ ಸಾರಥ್ಯದಲ್ಲಿ ಪಾಕ್‌ನ ಖೈಬರ್‌ಫಖ್ತುಂಕ್ವಾ ಪ್ರದೇಶದ ದಾಸು ಹೈಡ್ರೋ ಪವರ್‌ ಪ್ರಾಜೆಕ್ಟ್‌ನಲ್ಲಿ ಈ ಜನರು ಕೆಲಸ ಮಾಡ್ತಿದ್ರು. ಇದ್ರಲ್ಲೀ ಚೀನಾ ಹಾಗೂ ಪಾಕ್‌ನ ಜನ ಕೆಲಸ ಮಾಡ್ತಿದ್ರು. ಕಳೆದ ವಾರ ಚೀನೀ ಕಾರ್ಮಿಕರ ಮೇಲೆ ಆತ್ಮಾಹುತಿ ದಾಳಿ ನಡೆದು 5 ಮಂದಿ ಚೀನೀಯರು ಮೃತಪಟ್ಟಿದ್ರು. ಹೀಗಾಗಿ ಈ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಇನ್ನು ಚೀನಾ ವಿಚಾರವಾಗಿ ಆಕಡೆ ಫಿಲಿಪೈನ್ಸ್‌ ಕೂಡ ರೊಚ್ಚಿಗೆದ್ದಿದೆ. ಫಿಲಿಪೈನ್ಸ್‌ ರಕ್ಷಣಾ ಸಚಿವಾಲಯ ಒಂದು ಸ್ಟೇಟ್‌ಮೆಂಟ್‌ ರಿಲೀಸ್‌ ಮಾಡಿದೆ. ಇದ್ರಲ್ಲಿ, ʻದಕ್ಷಿಣ ಚೀನಾ ಸಮುದ್ರದಲ್ಲಿ ನಮಗೆ ಯಾವುದೇ ಸಂಘರ್ಷ ಬೇಡ. ಆದ್ರೆ ಈ ಭಾಗದಲ್ಲಿ ನಮ್ಮ ಸದ್ದಡಗಿಸೋಕಾಗಲ್ಲ. ನಾವು ಶರಣಾಗೋದಾಗ್ಲೀ, ಅಧೀನರಾಗೋದಾಗ್ಲಿ ಮಾಡಲ್ಲ, ಚೀನಾದ ನಡೆಗಳು ಆ ದೇಶ ಇತರ ದೇಶಗಳ ಜೊತೆ ಐಸೋಲೇಟ್‌ ಆಗಿರೋದನ್ನ, ಆ ದೇಶದ ಅಕ್ರಮ ಹಾಗೂ ಅನಾಗರಿಕ ಮನಸ್ಥಿತಿಯನ್ನ ತೋರಿಸುತ್ತೆ. ಚೀನಾಗೆ ಓಪನ್‌ ಆಗಿ, ಪಾರದರ್ಶಕವಾಗಿ ಕಾನೂನು ಮಾತುಕತೆ ಮಾಡೋಕೆ ಆಗಲ್ಲ. ಚಿಕ್ಕ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡುತ್ತೆ ಅಂತ ಫಿಲಿಪೈನ್ಸ್‌ ಚೀನಾ ಮೇಲೆ ಬೆಂಕಿ ಉಗುಳಿದೆ.

-masthmagaa.com

Contact Us for Advertisement

Leave a Reply